ನಿನ್ನ ನಾನು, ನನ್ನ ನೀನು Poem by PRAVEEN KUMAR Kannada Songs

ನಿನ್ನ ನಾನು, ನನ್ನ ನೀನು

ನಿನ್ನ ನಾನು, ನನ್ನ ನೀನು ಎಷ್ಟು ಕಾಲ ದೂರ ನಿಂತು
ನಿನ್ನೆ ನಾಳೆ, ಇಂದು ಮುಂದು ಎಂದು ಕಾಲ ದೂಡಲಿ?
ಮೂಡಲಲ್ಲಿ ಮೂಡಿಬಂದು, ನೆತ್ತಿಮೇಲೆ ನಿಂತ ಸೂರ್ಯ
ಪಡುವಲಲ್ಲಿ ಕೆಂಪಗಾಗಿ, ಕಪ್ಪುಚೆಲ್ಲಿ ಅಸ್ತನಾದ;
ಬೆಚ್ಚಗಿದ್ದ ಲೋಕವೀಗ ಕೊರೆವ ಚಳಿಯ ಗಾಳಿುಂದ
ಇದ್ದಬಿದ್ದ ಆಶೆಮೇಲೆ ಹಿಮದ ಹಾಸು ಹೊರೆಯ ಹೊಸೆದು
ನನ್ನ ಹೃದಯ ಶವದ ಮೇಲೆ ತಾಜಮಹಲ ಕಟ್ಟುತ್ತಿದೆ.

ಒಂದೆ ಬೇರಿನಿಂದ ಸಿಗಿದು, ಬೇರೆ ಬೇರೆ ಹೊರಟ ನಾವು
ಮತ್ತೆ ಕೂಡಿ, ತೆಕ್ಕೆ ಬಿಗಿದು, ಬೆಸೆದು ಬೆಳೆವುದಸಾಧ್ಯವೆ?
ನೀನು ಅಲ್ಲಿ, ನಾನು ಇಲ್ಲಿ, ಸಹಿಸಲಸಾಧ್ಯ ನೋವಿನಿಂದ
ಮನಸು ಹೃದಯ ಆತ್ಮದಿಂದ ನಿನ್ನ ನನ್ನ ಬಯಸುವಾಗ
ಎರಡು ಬರಡು ದೇಹ ಹೀಗೆ ದೂರವಿರುವುದಾವ ನ್ಯಾಯ?
ಏನೋ ಆಶೆ, ಸ್ಠೃ ನ್ಯಾಯ, ನಿನ್ನ ನನ್ನ ಕೈಯ ಹಿಡಿದು
ಇಲ್ಲಿವರೆಗೆ ತಂದಮೇಲೆ ಮಧ್ಯೆ ಕೈಯ ಬಿಡುವುದೆ?

ಕತ್ತಲೇರಿದಂತೆ ಒಳಗೆ, ತಿಳಿಯದಂತ ನೋವು ಭಯ,
ನೀನು ನಾನು ಮತ್ತೆ ಒಂದುಗೂಡಲಾರೆವೆಂಬ ಭಯ
ಒಳಗೆ ಹೊರಗೆ ಸೇರಿ ನನ್ನ ಬೆಂಕಿಯಾಗಿ ದಹಿಸುತ್ತಿದೆ,
ಇದ್ದಬಿದ್ದ ಬಾಳ ಬಯಕೆ ಅಂತರ್ಧಾನವಾಗಿದೆ;
ಬದುಕುಯೆಂಬ ನೇಗಿಲನ್ನು ಹೊತ್ತುನಿಂತ ಎತ್ತು ನಾವು
ಎಳದುದಷ್ಟೆ ಬಂತು ನಮಗೆ, ಬೆಳೆಯು ಬರುವ ಆಶೆುಲ್ಲ,
ನಿನ್ನ ನನ್ನ ಶ್ರಮವು ಮರಳಿನಲ್ಲಿ ಬಿತ್ತಿದ ಬೀಜವೆ?

ದೂರವನ್ನು ಜಿಗಿದು ನಾನು, ಅಡ್ಡಿಗಳನು ಸಿಗಿದು ಬಗೆದು,
ನಿನ್ನ ಸೇರಿ, ಕೈಯಿಯಿಂದ ಕಣ್ಣೀರನ್ನು ಒರೆಸುವಾಸೆ,
ನಿನ್ನ ಕಣ್ಣ ಪ್ರೀತಿಯಿಂದ ತುಟಿಯ ತುಂಬ ಸವರುವಾಸೆ;
ಬಾಹು ತುಂಬ ನಿನ್ನ ಹಿಡಿದು, ಹಿತದ ಮಾತಿನಿಂದ ನಿನ್ನ
ರಮಿಸಿ ಮೆರೆಸಿ, ನಿನ್ನ ತುಂಬ ತೃಪ್ತಿ ಧೈರ್ಯ ತುಂಬುವಾಸೆ;
ಮಾಸಿನಿಂತ ನಿನ್ನ ಮುಖದ ಚಿತ್ರ ನನ್ನ ಕೊಲ್ಲುತ್ತಿದೆ,
ನಿನಗೆ ಬೆಳಕು ಕೊಡುವ ಆಸೆ ಮೆಲ್ಲ ಮೆಲ್ಲ ಜಾರುತ್ತಿದೆ.

ಹೆಳವ ನಾನು, ಬೀಳು ನಾನು, ನಿನ್ನ ನೆಮ್ಮದಿಯಾಗದಾದೆ,
ನಿನ್ನ ನೋವು ದುಃಖ ಕಂಡು, ಇನ್ನು ನಾನು ಇರುವೆನಲ್ಲ!
ಬದುಕಲಾರೆ, ಹೋಗಲಾರೆ, ಚಿತ್ರಹಿಂಸೆ ನನ್ನ ಬಾಳು,
ನಿನ್ನ ನೋವು ಕಂಡು ಕಂಡು, ಅದನು ನಾನು ಉಂಡು ಉಂಡು,
ಒಳಗೆ ಒಳಗೆ ನನ್ನ ಲೋಕ ಪ್ರೇತಕಳೆಯ ತುಂಬುತ್ತಿದೆ;
ಲೋಕ ಹೀಗೆ, ಸ್ಠೃನಿಯಮ ಕ್ರೂರವೆಂಬ ಕಠಿಣ ಸತ್ಯ
ಬೆಳೆದುನಿಂತ ಹಾಗೆ ನಾನು ಕಣ್ಣೀರಿನಲ್ಲೆ ಜೀವ ತೊಳೆವೆ.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success