ಪ್ರೀತಿಯ ಬೆಂಕಿಯಲಿ ಕುದಿದುಕ್ಕೇರಿದ ಬಾಂಧವ್ಯ
ಕಾಲದ ವರಸೆಯಲ್ಲೀಗ ತಣಿದು ಹಳಸುತ್ತಿದೆ ನೋಡು.
ನಾನು ನೀನೆಂಬ ಭೇದಗಳ ತೊಡೆದು ಕೂಡಿಸಿದ ಬಂಧ
ಗೋಡೆ ಬೇಲಿಗಳನ್ನಿಟ್ಟು ನಮ್ಮ ದ್ರುವೀಕರಿಸಿದೆ ನೋಡು.
ಮಟಮಟ ಮಧ್ಯಾಹ್ನ ಕಣ್ಣು ಮುಚ್ಚಿ ಮಲಗಿದ್ದ ನಾವು
ಈ ಇಳಿ ಸಂಜೆಯಲಿ ಬೆಳಕಿಗೆ ಚಡಪಡಿಸುವೆವಲ್ಲ!
ಗಾಳಿ ಬೆಳಕುಗಳ ಸಮೃಧ್ಧಿಯಲ್ಲವಕಾಶ ಮರೆತವರು
ನಿರ್ವಾತದಲ್ಲುಸಿರಿಗೆ ಪರಿಪರಿ ಒದ್ದಾಡುವೆವಲ್ಲ!
ಕಟ್ಟಿದ ಕಟ್ಟಡಗಳೆಲ್ಲ ಕಳಚಿ ಪಾಳುಬಿದ್ದಿಮೆಂದು,
ಹೊಸ ಸೌಧ ನಿರ್ಮಾಣ ನಮ್ಮ ಮಿತಿಗೆ ಹೊರಗು.
ಹಿಂದೆ ಹೋಗುವ ಹಾಗಿಲ್ಲ, ಮುಂದೆ ಬಟ್ಟ ಬಯಲು,
ನಿಂತ ನೆಲವೆ ಬಿರುಕು ಬಿಟ್ಟಾಗ ನಮ್ಮ ಗತಿಯೇನು?
ನಿನ್ನ ಪ್ರೀತಿಯಲ್ಲರಳಿದ ಮೈಮನ ಕಮರುತ್ತಿದೆ ಈಗ,
ಬಂದೆನಗಮೃತವನುಣಿಸಲು ನೀನೀಗ ಹತ್ತಿರವೆ ಇಲ್ಲ.
ನನ್ನನ್ನಪ್ಪಿ, ಹಬ್ಬಿ ಬೆಳೆದ ಸುಂದರ ಹೂವಿನ ಬಳ್ಳಿ,
ನಿನಗಾಧಾರ ಪ್ಠು ಕೊಡುವದೃಷ್ಟ ನನಗೇ ಇಲ್ಲ.
ನೀನೆಲ್ಲೋ, ನಾನೆಲ್ಲೋ, ಬರೇ ಹಂಬಲ ನಮ್ಮದಾುತಲ್ಲ,
ದಾಟಲಾಗದ ಹಿಮಾಲಯ ನಮ್ಮ ಮಧ್ಯ ನಿಂತಿರುವಾಗ.
ಉತ್ತುಂಗದಲ್ಲಿದ್ದಾಗ ನಾವು ಸರಿತಪ್ಪು ಗುಣಿಸಿ ನಿಂತೆÉವು ದೂರ,
ಕಾಲ ಕೈಕೊಟ್ಟಾಗ ವಿಧಿಯೆಂದು ಸಿಡಿದು ನಿಂತೆÉವು ನೋಡು.
ಕಾಲ ಒಲಿದಾಗ ಹಿಮ್ಮೆಟ್ಟಿ, ಕಾಲ ಮುನಿದಾಗ ಬೇರ್ಪಟ್ಟು,
ನಮ್ಮ ಬೆಸುಗೆಯಲ್ಲನªರತ ಬಿರುಕು ತಂದುದು ಸರಿಯೆ?
ನಮ್ಮ ಸ್ವಂತದ ಪ್ರೀತಿ ತಡೆಹಿಡಿದು, ಲೋಕ ನಿಯಮಕೆ ಬಗ್ಗಿ,
ನಮ್ಮ ಪ್ರೀತಿಯೌನ್ನತ್ಯ ಬಲ ನಾವು ಘೋಸಿದೆವು ಚಿನ್ನ.
ನಿರಾಶೆಯ ಭರತದಲೂ ಕಳೆಗುಂದದ ಪ್ರೀತಿ ಬಾಂಧವ್ಯ
ನಿನ್ನ ನನ್ನ ಮುನ್ನಡೆಸುವುದು ಹೊಸತೊಂದು ದಿನಕೆ.
ನಿನ್ನ ನನ್ನ ಬಾಂಧವ್ಯ ನಿನ್ನೆನಾಳೆಯದಲ್ಲ, ಜನ್ಮಾಂತರದ್ದು,
ನೋವು ನಲಿವು, ಏರಿಳಿತವಿಲ್ಲಿ ಸಹಜ, ಸರಿ, ಕ್ರಮಬದ್ಧ.
ಕಾಲದ ಗತಿಯಲ್ಲಿ ಸಾಣೆ ಹಿಡಿದಷ್ಟು ನಮ್ಮೊಳಗಿನ ಪ್ರೀತಿ
ಹೊಸ ನುಣುಪನ್ನು ಬೆಳಕನ್ನು ಪಡೆಯುವುದು ಸತ್ಯ.
ಇಳಿತ ಭರತದ ನೋವ ಮರೆತು ನಿರ್ಧಾರದಲಿ ನಾವು
ಎದೆಕೊಟ್ಟು ಧೈರ್ಯದಲಿ ಗುರಿಯತ್ತ ಮುನ್ನಡೆಯುವವೇನು?
This poem has not been translated into any other language yet.
I would like to translate this poem