ನಡೆದು ಬಂದ ದಾರಿ Poem by Praveen Kumar in Bhavana

ನಡೆದು ಬಂದ ದಾರಿ

ನಿಮ್ಮೊಡನೆ ಹೋರಾಟಕ್ಕೆಂದು ಬಂದವರಲ್ಲ ನಾವು,
ನಿಮ್ಮೊಡನೆ ಕಾದಾಡಿ ಗೆಲ್ಲುವ ಬಯಕೆ ಮೂಡಿದವರಲ್ಲ;
ನಮ್ಮ ಸ್ಥಾಪಿಸಲೆಂದು ನಿಮ್ಮ ಭೂಮಿ ಸೀಮೆ ಕ್ರಮಿಸುವುದಿಲ್ಲ,
ಬೇರುಗಳ ಕಿತ್ತು ಕ್ರಾಂತಿಕಿಡಿ ಹಾರಿಸುವ ಕೆಂಡಗಳಲ್ಲ,
ಆಕಾಶಕೆ ಹಬ್ಬಿ ನಿರ್ಬಲರ ಹೊರದಬ್ಬುವ ವಾಂಛೆ ಕಂಡವರಲ್ಲ;
ಬಾಳಿನ ಸುಳಿಯಲಿ ಸಿಕ್ಕಿ ಹೇಗೋ ಬಂದಿಲ್ಲಿ ಸೇರಿದೆವು.
ಆಸರೆ ಬೆಂಬಲವ ಬಯಸಿ ಬಾಗಿಲಲ್ಲಿ ನಿಂತಿಹೆವು;
ಸ್ವಲ್ಪ ನಮಗೂ ಸ್ಥಳವ ಕೊಡಿ, ನಿಮ್ಮ ಸ್ನೇಹ ಸಹಕಾರ ಕೊಡಿ,
ಭಯ ಮುಜುಗರ ಮೀರಿ ಬಿಡಿ, ಸ್ಪರ್ಧೆ ಮತ್ಸರ ಮರೆತು ಬಿಡಿ,
ಕೆಲವು ದಿನಗಳ ನಮ್ರ ನೆಂಟರನ್ನು ಸಹನೆುಂದ ನಡೆಸಿಕೊಡಿ.

ನಿಮಗೆ ನಾವು ವ್ಶೆರಿಯಲ್ಲ, ನಮಗೆ ನೀವು ವ್ಶೆರಿಯಲ್ಲ,
ಬದುಕಿನೆದುರು ಶಸ್ತ್ರಧರಿಸಿ ಗುರಾಣಿ ಹಿಡಿದವರೆಲ್ಲರು;
ದ್ವೇಶಕ್ಲೇಶ ನಮಗೆ ಬೇಡ, ನಮ್ಮೊಳಗೆ ಮನಸ್ತಾಪ ಬೇಡ,
ಬಂದದನ್ನು ವಿನಯದಿಂದ ಹಂಚಿಕೊಂಡು ಬದುಕುವ;
ನಮ್ಮ ಹಾದಿ ದೂರವಿದೆ, ನಿಮ್ಮ ಹಾದಿ ಸುತ್ತು ಬಳಕಲಿದೆ,
ನಮ್ಮದಾರಿ, ನಿಮ್ಮದಾರಿ ದಾಟಿ ಗೋಡೆಯಾಗದು,
ದೇವರಿಟ್ಟ ಲೋಕವಿದು ನಮಗೆ ನಿಮಗೆ ವಿಶಾಲವಿದೆ,
ಹೆಜ್ಜೆಗೊಂದು ಜಾಗಕೊಟ್ಟು ಘನತೆುಂದ ಸರಿದು ನಿಂತು
ನಮ್ಮ ನಿಮ್ಮ ಸ್ನೇಹಬಂಧಕ್ಕೊಂದು ಭದ್ರ ಬುನಾದಿುಟ್ಟು
ಬದುಕಿನೆದುರು ಕದನದಲ್ಲಿ ನಿಮ್ಮೊಡನೆ ಕೂಡಿ ಹೋರಾಡ ಬಿಡಿ.

ನೀವಾರೆಂಬ ಸರಸ ವರಸೆ ಕುತೂಹಲವು ನಮ್ಮಲ್ಲಿಲ್ಲ,
ಬೇರು ಕಾಂಡ ಗೆಲ್ಲುಗಳ ವೈಶಾಲ್ಯವರಸುವ ರೂಢಿುಲ್ಲ,
ನೆಲ ಕೆದಕಿ ಬೇತಾಳ ಭೂತ ಹೊರತರುವ ಪರಪಾಟವಿಲ್ಲ;
ಅಂತರಾಳ ಸುಳಿಕಣ್ಣಿನಲ್ಲಿ ತಲೆಯ ಮರೆಸಿ ನಡೆವೆವು,
ನಮ್ಮದಾರಿ ಗೊಡವೆ ಬಿಟ್ಟು ಹಿಂದು ಮುಂದು ನೋಡೆವು;
ಗೋಡೆಗಳ ಕೆಡವಿ ಬಿಟ್ಟು ನಮ್ಮ ದಾರಿ ಬಿಟ್ಟುಬಿಡಿ,
ನಮ್ಮ ಬಯಲು ತುಂಬ ನಮಗೆ ಮನಸಾರೆ ನಡೆದಾಡಬಿಡಿ,
ನಿಮ್ಮ ಜನರ ಬಿಟ್ಟು ನೀವು ಭಿನ್ನರುಚಿಯ ಶುಚಿಯ ಕಲಿತು
ಎಲ್ಲ ಜನ ವರ್ಗದಲ್ಲಿ ಬೆಸೆದು ಬೆಳೆದು ನಿಲ್ಲಿರಿ,
ನಮ್ಮ-ನಿಮ್ಮ ದ್ವಂದ್ವ ಮರೆತು ವಿಶ್ವಮಾನವರಾಗಿರಿ.

ನಿಮ್ಮ ಹೃಸ್ವದ್ಠೃಯಲ್ಲಿ ನಮ್ಮ ಬಗೆಗೆ ಭೀತಿಯೇಕೆ?
ಜೌನ್ನತ್ಯ ಬುದ್ಧಿ ಬಗೆಗೆ ನಿಮ್ಮ ದಿಗಿಲು ದ್ವೇಶವೇಕೆ?
ನವಿಲು ಕಂಡ ಕೋಳಿಗಳಿಗೆ ಯಾಕೆ ಕ್ಲೇಶ ಮತ್ಸರ?
ಹೆಬ್ಬೆರಳ ಹಿಡಿತದಿಂದ ಮೂಗುದಾರ ಹಿಡಿಯಬಲ್ಲ
ನಮಗೆ ವಿನಯ ಸ್ನೇಹ ಹೊರತು ನಿಮ್ಮೊಡನೆ ಹೋರಾಟವಿಲ್ಲ;
ನಮ್ಮ ನಿಮ್ಮ ಪುಣ್ಯದಿಂದ ನಿಮ್ಮ ಮಧ್ಯೆ ಬಂದೆವು,
ಮತಿ ಮತಿ ಮಥನದಿಂದ, ಹೃದಯ ಹೃದಯ ಬೆಸುಗೆುಂದ
ನವನವೀನ ಸ್ಟೃುಂದ ಸುಖದ ವ್ಠೃ ಸುರಿಸುವ;
ದ್ಠೃ ದೂರ ಗುರಿಯಲ್ಲಿಟ್ಟು ಬಹಳ ದೂರ ಕ್ರಮಿಸಬೇಕು,
ಸಣ್ಣಪುಟ್ಟ ಕಲಹದಿಂದ ನಮ್ಮ ಗಮನ ತಡೆಯಬೇಡಿ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success