ಹೋರಾಟ Poem by Praveen Kumar in Bhavana

ಹೋರಾಟ

ಹೋರಾಡಿ ಹೊಡೆದಾಡಿ ಜೀವ ಕಳೆಗುಂದಿತು,
ಹೊಲಸಲ್ಲಿ ಗುದ್ದಾಡಿ ಜೀವ ಬೆಂಡಾಯಿತು;
ಕಳೆದುಳಿದ ತೇಜಸ್ಸು ಮಸುಕಾಗಿ ನಿಂತು,
ಕಳಿತ ಪ್ರೌಢಿಮೆ ಕೊಳೆತು ಹುಳದೊಡ್ಡಿಯಾಗಿದೆ ಇಂದು;
ಮೇಲೇರಿದರೂ ಮ್ಲಾನತಿಯಿಂದ ಮೋಕ್ಷವೆಂಬುದಿಲ್ಲ,
ಇದ್ದಲ್ಲುಳಿದರೆ ಹೊಲಸು ದುರ್ನಾತ, ಜೀವ ತಾಳುವುದಿಲ್ಲ;
ಗೊಬ್ಬರವೆಂದು ಬೇರನು ಹೂತು ಕಾಲವಾಗಿದೆ ಬಹಳ,
ಹುಲುಸು ಬೆಳೆಯುವ ಬದಲು ಹೊಲಸು ಹಬ್ಬಿದೆ ಇಲ್ಲಿ;
ಹೊರಗೆ ಕೀಳುವ ಹಾಗಿಲ್ಲ. ಅಲ್ಲೆ ಬೆಳೆಯುವ ಹಾಗೂ ಇಲ್ಲ,
ಮೈ ಕೈ ಹಬ್ಬುವ ತುರಿಕೆ ಸಹಿಸಿ ಸಹಿಸಿ ಎರಬೇಕಿಲ್ಲಿ,
ಚಿಕ್ಕಾಡು ಕಡಿತಗಳಿಗೆದೆ ಕೊಟ್ಟು,
ಗೆದ್ದಲು ಹುತ್ತದಲಿ ಮೈಯಿಟ್ಟು,
ರಕ್ತ ಕಪ್ಪಾಗಿ ಒಣಗುವವರೆಗೆ,
ಜೀವ ಹುಡಿಯಾಗಿ ಉದುರುವವರೆಗೆ;
ವಿಷಲಸಿಕೆಗಳ ಹೀರಿ ವಿಷ ಜೀವಿಯಾಗಿ ನಿಲ್ಲುವುದೊಂದೆ
ಇನ್ನುಳಿದ ದಾರಿ ಈ ವಿಷ ರಾಜ್ಯದಲ್ಲಿ;
ಎದುರಿರುವವರ ಕಡಿದು ವಿಷ ಹಬ್ಬುವ ವಿಷಮ ಬಾಳು
ದುಷ್ಟ ಸಹವಾಸದ, ಹೊಡೆದಾಟದ ಫಲ,
ಅಪರಿಹಾರ್ಯ ಶಾಪ, ಕಳಂಕ, ಧಾರುಣ ವೇದನಯು,
ಮೈ ಮೆತ್ತಿಕೊಂಡ ಮೈಲಿಗೆ ಬೆನ್ನ ಹಿಂದೆ ಬರುವುದು ಸಿದ್ಧ.

ಈ ರಾಡಿ ತೊಳೆಯುವ ಶೀಗೆಕಾಯಿಯಿಲ್ಲ,
ಶುಚಿ ಪರಿಶುದ್ಧತೆಗೆ ಗಂಗ ಜಲವೂ ಇಲ್ಲ,
ದಿನವಿಡಿ ಮೈಯುಜ್ಜುವ ದೀರ್ಘ ಸ್ನಾನ
ತೊಳೆಯದು ಈ ಆತ್ಮ ಕಳಂಕದ ಅಜ್ಞಾನ.

ಮಾಸಿದ ಪರಿಸರದಲ್ಲಿ ಬೆಳಕು ವಕ್ರೀಭವಿಸಿ,
ಬಿಳಿ ಸಾವಿರ ರೂಪ ತಳೆಯುವ ವರ್ಣಪಂಕ್ತಿ,
ಇಲ್ಲಿ ಎಲ್ಲವು ವಕ್ರ, ನೇರವು ಬಗ್ಗಿ
ಕಲಸು ಮೇಲೋಗರದ ವಾತಾವರಣ,
ರಾಡಿ ರಕ್ತವ ರಾಚಿ, ಹೋಳಿಯಾಡುವ ಅಸಹ್ಯ ಜನ
ಮೈಮತ್ತಿಕೊಂಡು ಕೊಬ್ಬುವ ಕಾಲ,
ಹೊಲಸಿನ ಬೊಂಬೆಗಳ ಬೇಜವಾಬ್ದಾರಿಯ ಕತ್ತಿಗೆ
ಕತ್ತನು ಕೊಡುವ ಕುರಿಗಳು ಕೆಲವು,
ದಾಸವಾಳದ ಕೆಂಪು ಮಾಲೆಯ ಧರಿಸಿ,
ಕುಂಕುಮ ಹಚ್ಚಿ, ಪೂಜೆಗೊಳ್ಳುವ ಕಾಲ;
ರಕ್ತದಿ ನಾಂದಿದ ಬಲಿವೇದಿಕೆಯ ರಾಡಿಯಲಿ
ಹೂತಿರುವ ಕಾಲು ಕುಸಿಯುವುದು ಕೆಳಗೆ;
ಮೈಲಿಗೆಗೊಂಡಿದೆ ಮೈ ಮನ ಹೃದಯ,
ತಲ್ಲಣಗೊಂಡಿದೆ ಸಹಜ ನಿಜ ಸಹ್ಲದಯ;
ಭೂತ, ಪ್ರೇತ, ಪಿಶಾಚಿ, ನಿರಾಚರ
ಕೇಳಿಯ ಈ ದುಷ್ಟ ಸ್ಮಶಾನದ ನಡುವೆ
ಹೋರಾಡಿ ಹೊಡೆದಾಡಿ ಜೀವ ಕಳೆಗುಂದಿತು,
ಹೊಲಸಲ್ಲಿ ಗುದ್ದಾಡಿ ಜೀವ ಬೆಂಡಾುತು;
ಕಳೆದುಳಿದ ತೇಜಸ್ಸು ಮಸುಕಾಗಿ ನಿಂತು,
ಕಳೆದುಳಿದ ತೇಜಸ್ಸು, ಮಸುಕಾಗಿ ನಿಂತು,
ಕಳಿತ ಪ್ರೌಢಿಮೆ ಕೊಳೆತು ಹುಳದೊಡ್ಡಿಯಾಗಿದೆ ಇಂದು.
ನೋಡಿದಲ್ಲಿ ಭಂಡತನ, ದ್ವೇಶ, ಹೊಗೆ, ಜಗಳ,
ದುರ್ನಾತ ಹೊರಡಿಸುವ ಗಂಜಳದ ರಾಶಿ,
ಯಾವ ಪುರುಷಾರ್ಥ ಬೆಂಬತ್ತಿ ತಲಪಿದೆನೊ,
ಯಾವ ದೂರ್ವಾಸ ಶಾಪಕ್ಕೆ ಈಡಾದೆನೊ!

ಇರುವ ಒಂದು ಬಾಳಿನುದ್ದ ದುಷ್ಟರ ಸಹವಾಸ,
ಇರುವ ಒಂದು ಜೀವಕೆಲ್ಲ ಗುದ್ದಾಟ, ದ್ವೇಶ, ಹೋರಾಟ,
ಇರುವ ಒಂದು ಬದುಕಿನಲ್ಲಿ ಹೊಲಸು, ಮೈಲಿಗೆ, ದುರ್ನಾತ,
ಶುದ್ಧಗಾಳಿ ಬೆಳಕುುಲ್ಲ, ಹೊಸ ರಾಗ ಸಂಗೀತವಿಲ್ಲ;
ಮುಕ್ತಗಾಳಿಗೂ ಮೂಗು ತಿವಿಯುವ,
ಹೊಸ ರಾಗ ಹಿಡಿಸದ ಭಂಡ ಜನರ ಹಿಂದೆ
ಬೆಳಕು ಮಬ್ಬು ದೆವ್ವವೆನುವ ಹುಚ್ಚು ಜನರ ಸಹಚರ್ಯದಲ್ಲಿ,
ಕುರಿಮಂದೆಯಲ್ಲಿ ದಣಿದ ಬಾಳು;
ಮುಕ್ತ ನಾನು, ಕುರಿಯಾಗನೆಂದು
ಮಂದೆ ಬಿಟ್ಟು ಮುಂದೆ ಬಂದರೆ
ದಂಗೆ ಎದ್ದೆನೆಂದು ತಿರುಗಿ
ಹಿಂದೆ ಒದ್ದು ಮುಂದೆ ನಡೆವರು;
ಕಣ್ಣು ಬಂಧನ ನನಗೆ ಕಟ್ಟಿ, ಮೂಗುದಾರ ಗಟ್ಟಿ ಕಟ್ಟಿ,
ಒಲ್ಲದಂತ ಕುದುರೆಯನ್ನು ಹೊಲಸು ಹೊಳೆಗೆ ನೂಕುವವರ
ನಡುವೆ ಬಿದ್ದು ದಂಗಾದೆನು;
ಸವಿ ಹಾಲನುಣುವ ಬಾುಯಲ್ಲಿ ಎಂಜಲನ್ನ ಅರೆದು, ಅರೆದು
ಬಾು ತುಂಬ ಹೊಲಸು ಹುಣ್ಣು ಮೂಡಿ ಮೇಲೆ, ನೋಡಿ, ಬಂತು;
ಗರ್ಭಗುಡಿಯ ಹೃದಯದಲ್ಲಿ, ಹೂವು ಹಣ್ಣು ಮಧ್ಯದಲ್ಲಿ
ನಂದಾದೀಪ ಬೆಳಕಿನಲ್ಲಿ ಪೂಜೆಗೊಳ್ಳುವ ನಮ್ಮ ದೇವ
ಭಿಕ್ಷೆಗಾಗಿ ಬೀದಿ ಬೀದಿ ಅಲೆವ ಸ್ಥಿತಿಯ ತಂದರು.
ಕಲಿಕಾಲ ಇದು, ಯಮಗಂಡಕಾಲ,
ಗುಣಾವಗುಣ ಮರೆತ ಬರಡು ನೆಲ,
ಪೈರುಗಳನುಂಡು ಕಳೆಗಳ ಮೊಳೆುಸುವ
ಅಕಾಲದ ಕಾಲ, ಅಸಂಗತ ನಿರ್ಭಾವ.

ಇಂದು ನಿನ್ನೆಗೆ ಈ ದುಸ್ಥಿತಿ ಸೀಮಿತವಲ್ಲ.
ಅಕ್ಷಯ ನಾಳೆಯ ಉದ್ದ ಬೆನ್ನು ಹಿಡಿಯುವುದು ಸಿದ್ಧ;
ಕಾಲ ಪುರುಷನ ಅನಂತ ಕಾಲುದಾರಿಯ ಉದ್ದ
ಕಂಬಳದ ಕೋಣನ ಹಾಗೆ ಕೆಸರು ಹಾರಿಸಿ ಮೇಲೆ
ಗುರಿಯನರಿಯದೆ ಓಡಿ ಓಡಿ ಬಳಲಿದೆ ಕಾಲು,
ಮೈ ಭಾರ ದೊಡ್ಡ ಹೊರೆ,
ಇದರಲ್ಲಿ ವಿಜಯವೆ ಬೇಡ;
ಆದರೂ ಬಾಲ ಹಿಡಿದು ಬೆನ್ನು ಹತ್ತುತ್ತಾರೆ,
ಓ ಎಂದು ಜಿಗಿದು ಹಿಂದೆ ಮುಂದೆ ನೂಕುತ್ತಾರೆ;
ಈ ಜಂಜಾಟದ ಓಟದಲಿ ಸಿಕ್ಕಿ ಕಾಲ ಕಳೆದುಹೋುತು,
ಚೂರದಾಶೆ ಶುಚಿರುಚಿಗಳ ಚೀಲ ಬಿದ್ದು ಹೋುತು;
ಕೆಸರು ಮೈಮೆತ್ತಿ, ಬಿಸಿಲಿನಲ್ಲೊಣಗಿ
ಹೊಡೆತಗಳ ತಿಂದು, ಕಡಿತಗಳಿಗೆ ಮೈುಟ್ಟು,
ತ್ವಚೆ ಮನಸು ಬಿಗಿದು ದಪ್ಪ ಮಂದವಾಗುತ್ತಿದೆ;
ಹುರುಪು ಹುಮ್ಮಸ್ಸು ಜೀವನದಿ ದೂರನಿಂತು
ಎಣ್ಣೆ ಹಿಂಡಿದ ಕೊಬ್ಬರಿಯಂತೆ ಜೀವವಾುತು;
ಒಡೆತನದ ನೆಲದಲ್ಲಿ ಅಡಿಅಡಿಗೂ ಪರದಾಟ,
ಎಡ ಕೈ ಹಿಡಿದದ್ದು ಬಲ ಕೈಗೆ ಸಿಗದಂತ
ವಿಧಿಯ ವಿಕಟ ಆಟ
ಆಡಿ ಆಡಿ ಜೀವ ದಣಿದು ಬಂತು.

ಪರ್ವತ ಶಿಖರಗಳ ಶ್ರೇಣಿ ಕಾದು ನಿಂತಿರುವಾಗ,
ಈ ಪುಟ್ಟ ಗುಡ್ಡ ಬೆಟ್ಟಗಳ ಹತ್ತಿಳಿದು, ದಣಿದು,
ಕೈ ಕಾಲು ಬಿದ್ದು ಆಯಸ್ಸು ಮುಗಿುತು ಬೇಗ;
ಆಕಾಶವೇರಿ, ಮೋಡಗಳ ಮುಟ್ಟುವ ತವಕ
ನೆಲದೊಳಗಿನ ಇಲಿಗಳ ಬಿಲದಲ್ಲಿ ಹೋುತು ಹೂತು;
ಮನಸ್ಸೆತ್ತರವಿದ್ದಷ್ಟು ದೇಹ ಪಾತಾಳಕೆ ಕುಸಿದು
ನೀಚ ನಿಶಾಚರರ ನಶೆಯ ನಲಿಕಯಲಿ ಬೆರೆತು, ಬೆವತು,
ಮತ್ತೆ ಮೇಲೇಳದಷ್ಟು ಬಿದ್ದಿರುವೆ ಮೈ ಮರೆತು.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success