ಮೃಗತೃಷ್ಣೆ Poem by Praveen Kumar in Bhavana

ಮೃಗತೃಷ್ಣೆ

ಆಶೆ ಮುಂದೆ
ವಿಧಿಯು ಹಿಂದೆ
ಮಧ್ಯೆ ನಾವು, ಕುರಿಯ ಮಂದೆ,
ಬೇಕು ಎಂದೆ
ಇಲ್ಲ ಅಂದೆ
ಹೋರಾಟದಲ್ಲಿ ಸೋಲು ನಂದೆ.

ಅಜ್ಞಾತ ಕೈ
ವಿಧಿಸಿದ್ದೆ ಸೈ
ನಾ ತಾಳಕ್ಕೆ ತಕ್ಕ ಥಕ್ಕ ಥೈ,
ಆಕಾಶ ಚಂದ
ನೆಲದ ಬಂಧ
ನಡುವೆ ನಮ್ಮ ತ್ರಿಶಂಕು ಪಂದ್ಯ.

ಕತ್ತಲೆಲ್ಲ
ದೀಪವಿಲ್ಲ
ಮುಂದು ದಾರಿ ಶಿವನೆ ಬಲ್ಲ,
ಅಸ್ಪಷ್ಟ ಛಾಯೆ
ಮನದ ಮಾಯೆ
ಭವಿಷ್ಯ ಅನಿರ್ಧಿಷ್ಟ ನಾವೆ.

ಕನಸು ಕಣ್ಣು
ಬಿರುಸು ಮಣ್ಣು
ನಡಿಗೆ ಮಾತ್ರ ಕಿವುಡು ಕುರುಡು,
ನಡೆದ ಹಾಗೆ
ದಾರಿ ಒದಗೆ
ನಾನು ನಾನು, ಒಳಗೆ ಹೊರಗೆ.

ಯಾರು ನಾನು
ಸತ್ಯವೇನು
ನನ್ನಜೀವ ಅರಿಯದು,
ಎಷ್ಟು ದೂರ
ಯಾವ ಭಾರ
ನನ್ನ ಉಸಿರು ವಿಧಿಸದು.
ವಿಧಿ ಆವರ್ತ
ಚಕ್ರ ತೀರ್ಥ
ನಡುವೆ ಒಂಟಿ ಕಾಲು ಧ್ಯಾನ,
ಎಲ್ಲಿ ಹೊತ್ತು
ಎಸೆವುದೊ
ನಿನ್ನೆ ನಾಳೆ ಮಧ್ಯೆ ನನ್ನ.

ಬೆಳಕಿನೇಣಿ
ಕಲ್ಲು ಮುಳ್ಳು ಓಣಿ
ಮಹಾತ್ಮ ನಡೆವ ಕಾಲು ದಾರಿ,
ಕಾಲಿಟ್ಟ ಕಡೆ
ಕುರುಡು ನಡೆ
ಕಾಲ ಬಿಡಿಸಿಟ್ಟ ವಿಧಿ.

ಒಳಗೆ ನೋಡಿ
ಹೃದಯ ಕೂಡಿ
ದೃಢತೆುಂದ ನಡೆಯಬೇಕು,
ಕತ್ತಲಿರಲಿ
ಬೆಳಕೆ ಬರಲಿ
ಆತ್ಮ ದೀಪ ಉರಿಯಬೇಕು.

ಆಶೆ ಗುರಿ
ಹಿಡಿದೆ ಸರಿ
ಪ್ರಯತ್ನ ಬೇಕು ಪರಿಪರಿ,
ಬಂದ ಪಾಲು
ಜೇನು ಹಾಲು
ನನ್ನದೆನುವೆ ಹಿಗ್ಗಿ ಹೀರಿ.

ನಾನು ನಾನು
ವಿಧಿಯು ಅವನು
ನನ್ನ ನಾನು ಉಳಿಸಬೇಕು,
ಬರುವ ಅವನು
ನಾಳೆಗಿರನು
ನನ್ನ ಕೊಟ್ಟು ಕರೆಯಲಾರೆ.

ಸಣ್ಣ ಹೆಜ್ಜೆ
ಬಣ್ಣ, ಗೆಜ್ಜೆ
ಒಳಗಿನಿಂದ ಮೂಡುವುದು,
ಗುಡುಗು ಸಿಡಿಲು
ಭಾಗ್ಯ ಕಡಲು
ಮೇಲಿನಿಂದ ಒದಗುವುದು.

ಒಳಗು ಗಟ್ಟಿ
ಹೊರಗು ಬಿಟ್ಟಿ
ಗಟ್ಟಿ ಬಿಟ್ಟಿ ಬೆಸೆದು ಬರಲಿ,
ಬೆಸೆದ ಶಕ್ತಿ
ಅಗ್ರ ಪಂಕ್ತಿ
ಮುನ್ನಡೆಸುವ ಮೃಗತೃಷ್ಣೆ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success