ಮೂರ್ಖರ ಲೋಕ Poem by Praveen Kumar in Bhavana

ಮೂರ್ಖರ ಲೋಕ

ಮೂರ್ಖರ ನಡುವಲಿ ಜಾಣ
ಜಾಣರ ನಡುವಿನ ಮೂರ್ಖನಿಗೆ ಸಮನಲ್ಲ,
ನಗೆಪಾಟಲು, ಅವಹೇಳನ,
ಸಂಖ್ಯಬಾಹುಳ್ಯದ ಚಕ್ರವ್ಯೂಹದ ಒಳಗೆ
ಏಕಾಂಗಿ ಅಭಿಮನ್ಯುವಿನ ಹಾಗೆ;
ತಲೆ ಹುದುಗಿಸಲಾರ,
ಮೇಲೆದ್ದು, ಸೆಟೆದು ತಲೆ ಬಲಿಕೊಡಲಾರ;
ಅವ ಕಣ್ಣಿದ್ದು ಕುರುಡ, ಕಿಮಿದ್ದು ಕಿವುಡ,
ಬಾುುದ್ದು ಮೂಕ,
ಇದು ಆಂತರ್ಯದ ದಾರುಣ ಸಾವು.

ಉತ್ತರ ಕುಮಾರರ ಮಧ್ಯೆ ಪಾರ್ಥ ಅಪಾತ್ರ,
ಬೆನ್ನು ತಿರುಗದೆ ರಥವ ಹಿಂದೆ ಓಡಿಸುವ ಪಾತ್ರ.

ಅವನೆಲ್ಲರಂತಲ್ಲ, ಬಗ್ಗುವ ಹಾಗಿಲ್ಲ,
ಅವರೆಲ್ಲರಿಗೆ ತೊಡಕು, ಚೌಕಟ್ಟಿಗೆ ಹೊರಗು,
ಅವ ಅವರತನ ಸಾಧಿಸಲು ವಿಧಿುತ್ತ ಕೊಡುಗೆ,
ಅವರ ವಿರಾಮದ ಕ್ರೀಡೆ, ಮೈ ಕೈ ತೀಟೆಗೆ ಬೇಟೆ,
ಎಲ್ಲ ಹುಂಬರ ಮಧ್ಯೆ ಅವ ಮೈ ಕಾಯಬೇಕು;
ಅವನು ತೋಳಗಳ ಮಧ್ಯೆ ತೊಳಲಾಡುವ ಸಿಂಹಮರಿ,
ತನ್ನ ಬಲೆಯಲೆ ಬಿದ್ದ ಕುಶಲ ಜೇಡನ ಪರಿ;
ಅವ ನಿಲ್ಲುವ ಹಾಗಿಲ್ಲ, ಬಿಟ್ಟು ಓಡುವ ಹಾಗಿಲ್ಲ,
ಸಹಿಸುವ ಹಾಗಿಲ್ಲ, ಬೇಡವೆನ್ನುವ ಹಾಗಿಲ್ಲ,
ಸಹಿಸದೆಯೂ ಸಹಿಸುವ ಅಸಂಬದ್ಧಸ್ಥಿತ್ವ.

ಮೇಲೇರನೊ, ಅವ ನಾಲಾಯಕ್ಕೆಂಬ ಹಾರಾಟ,
ಮೇಲೆದ್ದನೊ, ಪ್ರತಿರೋಧಿ ಇವನೆಂದು ಹುಟ್ಟು ಹೋರಾಟ.

ತಗ್ಗಿ ಬಗ್ಗಿ, ಮೈ ಮನಸು ಹಿಚುಕಿ ಹಿಚುಕಿ
ಹುಂಬರ ಜಾತ್ರೆಗೆ ತನ್ನ ಒಗ್ಗಿಸಿಕೊಳ್ಳಬೇಕು,
ಅಥವ ಹಿಗ್ಗಿ ಚಾಚಿದಲ್ಲೆಲ್ಲ ಮೈ ಕೈ ಬಲಿ ಕೊಟ್ಟು
ಹಸಿದ ನಂಜು ನಾಲಿಗೆಗೆ ರಕತದೌತಣವಿಟ್ಟು
ಮೂರ್ಖತನಕೆ ಸೋಲೊಪ್ಪಬೇಕು;
ಮೂರ್ಖರ ನಡುವಿನಲಿ ಮೂರ್ಖತನ ಸ್ವರ್ಗ,
ಸುಖ, ಶಾಚಿತಿ, ಸಿರಿಗೆ ಆರಾಮದ ಮಾರ್ಗ;
ಪಾರ್ಥೀನಿಯಮಿನ ನಡುವೆ ಬೆಳೆದ ತುಳಸಿಯ ರೀತಿ
ಎರಡು ಲೋಕದ ಮಧ್ಯೆ ಕಾಲು ಜಾರುವ ಭೀತಿ,
ಮೂರ್ಖರ ಲೋಕದಲ್ಲಿ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success