ಮಳೆಯು ಬಂದಿದೆ Poem by Praveen Kumar in Bhavana

ಮಳೆಯು ಬಂದಿದೆ

ಮಳೆಯು ಬಂದಿದೆ, ಭೂಮಿ ತಣಿದಿದೆ,
ಹಸುರು ಹಬ್ಬಿದೆ, ಚೆಲುವು ಚಿಗುರಿದೆ,
ಏನೊ ತಿಳಿಯದ ಹುರುಪು ಪಸರಿಸಿ
ಭೂಮಿ ತಾುಯ ಮಡಿಲು, ಮೈಯಲಿ
ಹೊಸತು ಜೀವನ ಹಬ್ಬಿ ನಿಂತಿದೆ,
ಹರ್ಷ ಪುಳಕದ ಹೊನಲು ಹರಿದಿದೆ.

ಮಣ್ಣು ಕಣದಲಿ ಹಿತದ ವಾಸನೆ,
ಗಾಳಿ ಮೈಯಲಿ ಕನಸು ಕಂಪನೆ,
ಭೂಮಿ ತೊಟ್ಟಿಲು ತೂಗಿ ಜೋಗುಳ
ಹಾಡಿ ತಂದಿದೆ ತೃಪ್ತ ನಂದನ.

ನೆಲವು ಮಿಂದಿದೆ, ಗಗನ ತುಂಬಿದೆ,
ಗಾಳಿ ಮಳೆಯಲಿ ಭೂಮಿ ನಗುತಿದೆ,
ಮಿಂಚು ಗುಡುಗಿನ ಅಟ್ಟಹಾಸಕೆ,
ದೈತ್ಯ ಮರಗಳ ನೃತ್ಯದಾಟಕೆ
ಮಳೆಯ ರಭಸವು ಧಾಟಿ ಹಾಡಿದೆ,
ನಿಸರ್ಗ ಮೈಯ ಬಿಚ್ಚಿ ತೋರಿದೆ.

ಏನು ರಭಸವೊ, ರೌದ್ರರೂಪವೊ,
ಭೂಮಿ ತಾುಯ ಮುನಿಸು ನಟನೆಯೊ,
ಮಳೆಯ ತಾಂಡವದಲ್ಲಿ ಚೆಲುವಿದೆ,
ತುಂಬಿ ಹರಸುವ ಪ್ರೀತಿ ಒಲವಿದೆ.

ಮಳೆಯ ಪುಳಕದಿ ನಲಿವ ನಾಡಲಿ,
ಕಣ್ಣು ಅರಿಯದ ಬಣ್ಣ ಹರಡಿದೆ,
ಕಿವಿಗೆ ಕೇಳದ ನಾದ ತುಂಬಿದೆ;
ನಾಡಿನಾತ್ಮವು ಜಡತೆ ಬಂಧನ
ಮೀರಿ ಮೇಲಕೆ ಹಬ್ಬಿ ತಂದಿದೆ
ಮಳೆಯ ಜೊತೆಯಲಿ ಶಾಂತಿ ಸಂಪದ.

ದಿಕ್ಕು ದಿಕ್ಕಲಿ ಮಳೆಯ ಅಬ್ಬರ,
ಮೋಡ ಹರಡುವ ಗಾಳಿ ಬೊಪ್ಪರ
ನಿದ್ರೆ ಕೆಡವಿದೆ, ಹುರುಪು ತಂದಿದೆ,
ಜೀವ ಜೀವನ ಬೆಸುಗೆ ಮಾಡಿದೆ.

ಮಳೆಯ ಲೋಕದ ತೇವಗಾಳಿಯ
ಹಿತದ ಸ್ಪರ್ಷವೊ, ಸ್ವರ್ಗ ಸುಖವು,
ಗೂಢ ಕಲ್ಪನೆ ತರುವ ಪ್ರಕೃತಿ
ಒದ್ದೆ ಮೈಯಲಿ ನಿಂತ ಭಂಗಿಯೊ,
ಆತ್ಮ ಪ್ರಕೃತಿ ರತನ ಸಾಧಿಸಿ
ಚಳಿಯ ಮೈಯಲು ಬಿಸಿಯ ತಂದಿದೆ.

Friday, April 29, 2016
Topic(s) of this poem: rain
COMMENTS OF THE POEM
READ THIS POEM IN OTHER LANGUAGES
Close
Error Success