ಅತೃಪ್ತಿ Poem by Praveen Kumar in Bhavana

ಅತೃಪ್ತಿ

ಮನಸ್ಸು ಶುಚಿ ಹಾಲಿನಂತೆ,
ಹೆಪ್ಪು ಹಿಡಿಸಿ ಒಡೆದರೆ
ಬೆಣ್ಣೆ ಕಡೆಯಬಹುದು,
ತುಪ್ಪ ಕಾುಸಬಹುದು;
ಮನಸ್ಸು ಚೀನದ ಗೋಡೆಯಂತೆ,
ಬಿರುಕು ಬಿಟ್ಟರೆ ಸಾವಿರ ಚಿತ್ರಗಳು,
ನೂರಾರು ಭಾವಗಳು, ಭಾವಾವೇಗ, ರಸ ಉದ್ವಿಗ್ನತೆಗಳು,
ಬೆಂಕಿ, ಕಾಡ್ಗಿಚ್ಚು, ಜ್ವಾಲಾಮುಖಿಗಳು
ಸವ್ಯಸಾಚಿಯ ಶರಗಳಂತೆ
ಪುಂಖಾನುಪುಂಖ ಸಿಡಿದು ಹೊರ ಹಾರುವುವು;
ಮನಸ್ಸು ಸಾಗರದಂತೆ,
ತುಫಾನೆದ್ದು ಹೊರಶಾಚಿತಿಯ ಕದಡಿದರೆ
ಆಕಾಶದೆತ್ತರಕೆ ತೆರೆಗಳು ಮೇಲೆದ್ದು
ಸಿಡಿದು ಹಾರಿಸಿ ಚೆಲ್ಲಿ
ಅಲ್ಲೋಲ ಕಲ್ಲೋಲ ಮಾಡಿ
ಹೊಸ ಸತ್ಯಗಳ ದಡಕೆ ರಾಚುವುವು;
ಬಿಗಿದಿದ್ದ ಬೇಲಿಗಳ ಒಗೆದು,
ಒಳಗೆ ಹೊರಗಾಗಿ, ಹೊರಗೆ ಒಳಗಾಗಿ,
ಬಿರುಗಾಳಿಯಾಗಿ
ಹೊಸ ಹೊಸ ಸತ್ಯಗಳ ಎದುರಲ್ಲಿ ಬಿಚ್ಚುವುವು.

ಒಡೆಯದ, ಬಿರುಕು ಬಿಡದ, ತುಫಾನೇಳದ ಮನಸ್ಸು
ಶೀತಲ ಉಕ್ಕಿನ ಗೋಡೆಯಂತೆ,
ಬಿಗಿ, ನಿಶ್ಚಲ, ಮೌನ, ಅಭೇದ್ಯ,
ಭಾರ, ಸಾಂದ್ರ, ಬರಡು, ಬಯಲು,
ಹುಟ್ಟು ಸಾವನು ಮೀರಿದ ಯೋಗನಿದ್ರೆ;
ಇದು ಸಜೀವ ನಿರ್ಜೀವತೆ,
ನಿರ್ಭಾವ, ನಿಷ್ಕಲ್ಮಷ ಬಿಳುಪಿನ ಹೊಳಪು,
ನಿಸ್ಸಾರ ಯಾಂತ್ರಿಕತೆಯು.

ಆಶಾಂತತೆಯ ವಿದ್ಯುತ್ತು ಆಘಾತ ಕೊಟ್ಟಾಗ,
ಒಳಭಾವ ಧ್ರುವೀಕರಣಗೊಂಡು
ದ್ವಂದ್ವಗಳ ಪ್ರಪಾತದಲಿ
ಜೀವದಲಿ ಕಂದರಗಳೆದ್ದು
ಒಳಗಿಂದ ಚಿನ್ನ ಬೆಳ್ಳಿ ಲೋಹಗಳು, ಅಲಭ್ಯ ಅನಿಲಗಳು
ಮೆಲ್ಮೈಗೆ ದುಮುಕುವುವು;
ಮಲಗಿದ್ದ ಸತ್ಯಗಳು
ಬಡಿದೇಳುವುವು,
ಮನಸಿನಾಕಾಶದ ತುಂಬ
ಉಲ್ಕೆ ಧೂಮಕೇತುಗಳು
ಹೊಳೆಯುತ್ತ ಪ್ರತ್ಯಕ್ಷವಾಗುವುವು;
ಇದೊಂದು ಘೋರ ಸಮುದ್ರ ಮಂಥನ,
ಅತೃಪ್ತಿಯ ಕಾಳ ವಿಷಗಳ ಮಧ್ಯೆ
ಅಮೃತದ ಉದಯ;
ಜೀವ ತೇಜಸ್ಸು ಅತ್ಯಪ್ತಿಯ ಮಧ್ಯೆ
ವಕ್ರೀಭವಿಸಲು
ಭಾವಗಳೊಡೆದು
ರಂಗುರಂಗಾಗಿ
ಜೀವನ ಬಣ್ಣ ತಾಳುವುವು.
ಗೋಡೆಗಳೊಡೆುರಿ,
ಕಿಡಿಕಿ, ಬಾಗಿಲು ತೆರೆುರಿ ಬೇಗ,
ಎತ್ತರದಿಂದ ನೆಲಕ್ಕೆ ದುಮುಕಿರಿ,
ಧೂಳು ಮಣ್ಣಲಿ ಬೆರೆುರಿ ಬೇಗ:
ನೇರಕೆ ನಡೆಯದೆ
ಎಡಬಲ ತಿರುಗಿ, ಜೀವನ ನೋಡಿರಿ,
ಆಘಾತಕ್ಕೆದೆ ಕೊಟ್ಟು,
ದ್ವಂದ್ವಕ್ಕೆ ಬಡಿದೆದ್ದು
ಅತೃಪ್ತಿಯ ಬೆಂಕಿ ಕಾಡ್ಗಿಚ್ಚಾಗಲಿ,
ಜೀವವು ಉರಿಯಲಿ,
ಮನಸ್ಸು ಕುದಿಯಲಿ,
ಇದೇ ಹೊಸ ಸ್ಟೃಯ ಧಾರಕ ಪರಿಸರ,
ಇದು ಹೊಸ ಸತ್ಯದ ಉದಯದ ಸೂತ್ರ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success