ದಿನರಾತ್ರಿ ಎನ್ನದೆ ಭೂಮಿ ಸುತ್ತುವ ಓ ತಪಸಿಯೆ,
ಬಳಲಿಕೆ, ಬಾಯಾರಿಕೆ ನಿನಗೊಂದೂ ಇಲ್ಲವೆ?
ಇಹಪರವನೆನ್ನದೆ ಜೀವತುಂಬುವ ತೇಜ ಪುಂಜವೆ,
ಕಾಲ ಮಿತಿ, ಕತ್ತಲು ನಿನಗೆಂದೂ ಬಾರದೆ?
ಉರಿದು ಉರಿದು ಬೆಳಕು ಕೊಟ್ಟು ಯಾರ ಹೀಗೆ ಹುಡುಕುವೆ?
ಯಾವ ಮಾಯಕ ಯಾಗಯಾಜನಕ್ಕಾಗಿ ಹುಡುಕಿ ಸುತ್ತುವೆ?
ದಿನರಾತ್ರಿ ಎನ್ನದೆ ಭೂಮಿ ಸುತ್ತುವ ಓ ತಪಸಿಯೆ,
ಬಳಲಿಕೆ, ಬಾಯಾರಿಕೆ ನಿನಗೊಂದೂ ಇಲ್ಲವೆ?
This poem has not been translated into any other language yet.
I would like to translate this poem