ಸಂವೇದನೆ Poem by Praveen Kumar in Bhavana

ಸಂವೇದನೆ

ಸಂವೇದನೆಯೊಂದು ಪರಕಾಯ ಪ್ರವೇಶದ ದಾರಿ,
ನಾನು ನನ್ನದರಿಂದ ಹೊರಗೆಳೆವ ಸಂಮೋಹನಾಸ್ತ್ರ;
ಸಂವೇದನೆಯು ಜೀವಜೀವವನೊಂದಾಗಿಸುವ ಗಂಟು,
ರಸ ಜೀವನಕೆ ಸ್ಪಂದಿಸುವ ಸುಖದಾಂತರ್ಯದ ಗುಟ್ಟು;
ಆತ್ಮದಾಳದಿ ಹರಿವ ಜೀವನರಸದೊತ್ತಡದ ಒರತೆ,
ಭಾವಲೋಕ ಬೆಳಗಿಸು ದೀಪ, ಹೃದಯದ ಹಣತೆ;
ರಸಿಕ ಸಂಪ್ರೀತಿಯ ಹೃದಯ ಹೃದಯ ಸಂವಾದ,
ಹೃದಯದಾಳದ ಕಾರಂಜಿ, ಭಾವ ಸಂಗೀತ;
ಸಂವೇದನೆಯ ಹಿತಕಾವಿನಲಿ ಲೋಹ ಹೂವಾಗುವುದು,
ಲೋಭ ಮತ್ಸರಗಳಿಂಗಿ ವಾತ್ಸಲ್ಯ ಬೇರೂರುವುದು.

Saturday, April 30, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success