ಮಲ್ಲಿಗೆ ಬಳ್ಳಿ Poem by PRAVEEN KUMAR Kannada Poems

ಮಲ್ಲಿಗೆ ಬಳ್ಳಿ

ಎಲ್ಲಿ ಹುಡುಕಲಿ, ನಿನ್ನ, ಮಲ್ಲಿಗೆ ಬಳ್ಳಿ,
ಕಾಡಲ್ಲೊ, ನಾಡಲ್ಲೊ, ದೂರದ ಮೇಡಲ್ಲೊ?
ಹೇಗೆ ಹುಡುಕಲಿ, ನಿನ್ನ, ಮಲ್ಲಿಗೆ ಬಳ್ಳಿ,
ಮೊಲ್ಲೆ ಚೆಲ್ಲುವ ತಂಪೆಲರ ಜಾಡು ಹಿಡಿದು?
ಚಂದಿರ ಹುಣ್ಣಿಮೆ ಮೋಹನಾಸ್ತ್ರದಿ
ನಿನ್ನೆಡೆ ಬಂದು ಮೈಮರೆ ತರುವ,
ಸೂರ್ಯನೊ ದಿನವಿಡಿ ನಿನ್ನನು ನಗಿಸಿ
ಕತ್ತಲೆ ಹಬ್ಬಲು ಮುತ್ತಿಡೆ ಬರುವ,
ನಾನೆಲ್ಲಿ, ಹೇಗೆ ಹುಡುಕಲಿ, ಚೆಲುವೆ?
ಚಂದಿರನ ಹುಣ್ಣಿಮೆ ಮೋಹನಾಸ್ತ್ರವಿಲ್ಲ,
ನಿನ್ನ ನಗಿಸಿ ಮುತ್ತಿಡಲು ಸೂರ್ಯನೋ ನಾನಲ್ಲ;
ಆಶೆಯ ದೀಪದ ಹೊಂಬೆಳಕಿನ ಕಣ್ಣು,
ನಿನ್ನಾಶೆ ದಾಹದಲಿ ಬಿಗಿಗೊಂಡ ದೇಹ
ನನ್ನ ಮೋಹನಾಸ್ತ್ರ, ನಿನ್ನ ಹುಡುಕುವ ಶಸ್ತ್ರ;
ಭರವಸೆಯ ಬೆಂಬಿಡದೆ, ನಿರಾಶೆಯ ಮನ್ನಿಸದೆ,
ಎಲ್ಲಿ ಹುಡುಕಲಿ, ನಿನ್ನ, ಮಲ್ಲಿಗೆ ಬಳ್ಳಿ?

Wednesday, July 12, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success