ಗೆಜ್ಜೆಯ ಹೆಜ್ಜೆ Poem by PRAVEEN KUMAR Kannada Poems

ಗೆಜ್ಜೆಯ ಹೆಜ್ಜೆ

ದೂರ ದಿಗಂತದ ಮುಗಿಲಿನ ಮರೆಯಲಿ,
ಕಾಲದ ಕತ್ತಲು ಕಳೆವ ಕೋವರಿಯಲಿ,
ಸುತ್ತಲು ಬೆಳಕಿನ ಹೊನಲನು ಹರಿಸಿ,
ಗೆಜ್ಜೆಯ ಝಣ ಝಣ ಹೆಜ್ಜೆಯನಿಟ್ಟು
ಮಂಗಳ ಧ್ವನಿಯಲಿ ನನ್ನೆಚ್ಚರಿಸಿದೆ,
ನೋವಿನ ನಚ್ಚಣದಿ ನನ್ನನ್ನುಳಿಸಿದೆ.
ನಿಟ್ಟಾಲಿಯನೆಟ್ಟು ನಿನ್ನನ್ನು ಕಾಯುವೆ,
ಹೆಜ್ಜೆಯ ಗೆಜ್ಜೆಯ ಸಾಂಗತ್ಯವನರಸುವೆ;
ನೀ ಮೂಡಿ ಬರುವ ದಿನ ಮೈತಾಳಿ ಬರುವಾಗ,
ನಿನ್ನ ಸೌರಭದಲ್ಲಿ ತಂಗಾಳಿ ತುಂಬಿರುವಾಗ,
ಆತುರದ ಭರದಲ್ಲಿ ಮಾತು ಸ್ಥರ ತಪ್ಪುವುದು,
ಕಾಲ ನೆಲ ನಿಜ ನನ್ನ ಕಲ್ಪನೆಗೆ ದನಿ ಕೂಡುವುವು.

Wednesday, July 12, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success