ನನ್ನ ಹೃದಯತಾವರೆ ಸುತ್ತ ಸುತ್ತುವ ಭೃಂಗ
ಆತ್ಮ ಗಂಗೆಯಲೆದ್ದ ತೃಪ್ತ ಸುಂದರ ತರಂಗ,
ನೀನಿಲ್ಲಿದ್ದರೇನು, ನೀನಲ್ಲಿದ್ದರೇನು, ನೀನೆಲ್ಲಿದ್ದರೇನು?
ನೀನಿಂದೂ, ನೀನೆಂದೂ ನನ್ನಲ್ಲಿ ನಾನಾಗಿಲ್ಲವೇನು?
ಬರಡು ಕತ್ತಲಿನಲಿ ಉಷೆಯ ಬೆಳಕಿನೋಪದಿ ಬಂದೆ,
ರಸರಂಗು ಹರುಷ ಪ್ರವಾಹದಲ್ಲೆನ್ನ ಮೈಮರೆಸಿ ಮುಂದೆ
ಪ್ರತಿಸ್ಟೃ ದೇವತೆಯಾಗಿ ಯೌವನವ ತಂದೆ,
ಆತ್ಮದೇಗುಲದಲ್ಲಿ ಚಿಮ್ಮುವ ಜ್ಞಾನದೀಪ್ತಿಯ ಬೆಳಕು,
ನನ್ನಾತ್ಮೆ ಲಾವಣ್ಯ, ನನ್ನೆದೆಯ ಸ್ಪಂದನದ ಚೈತನ್ಯ ನೀನು,
ನಿನ್ನಾತ್ಮ ಸ್ಪಟಿಕದಲಿ ಮಿಂದ ಪ್ರತಿಫಲನ ನಾನು.
ನೀನೆನ್ನಾತ್ಮದ ಸ್ವಾದ, ಮಲ್ಲಿಗೆ ನಿಷ್ಕಲ್ಮಶ ನಗು,
ಜನ್ಮ ಜನ್ಮದ ತಪದ ಚೈತನ್ಯ ಸಿದ್ಧಿ.
This poem has not been translated into any other language yet.
I would like to translate this poem