ಓಡುವುದು ಸರಿಯೆ? Poem by PRAVEEN KUMAR Kannada Poems

ಓಡುವುದು ಸರಿಯೆ?

ಬೇಕು ಬೇಕೆಂದು ಬಯಸಿದ್ದೆಯಲ್ಲ,
ಮತ್ತೆ ಹೀಗ್ಯೆಕೆ ದೂರ ನಿಂತ್ಕೊಂಡೆ?
ನನ್ನ ಬಿಟ್ಟು ಇರಲಾರೆನೆಂದವಳು
ಮತ್ಯೆಗೆ ಈಗ ಜೀವನೂಕುತಿರುವೆ?

ಅರ್ದ ದಾರಿ ಮೀರಿ ಇಡಿದಾರಿ ಬಂದವಳು
ನಾನು ಅರ್ದ ದಾರಿ ಬಂದಾಗ ಇಂದೆ ಓದೆ ಯಾಕೆ?
ಇಂದೆನೆ ನಿಂತು ಕನ್ನೊರಸುತ್ತ ಇಂಗೆ
ಕಂಗಾಲಾದವರಂತೆ ದುಕ್ಕಿಸುವೆ ಯಾಕೆ?

ನಾನೆಂದರೆ ನಿನಗೆ ಇಷ್ಟೊಂದು ಎದರಿಕೆನೆ?
ಚೀ, ಪಿರೀತಿ ಎದರಿಕೆಗೆ ಎಲ್ಲಿಯ ಸಾಮ್ಯ?
ನಿನ್ನ ಪಿರೀತಿ ಮೇಲೇನೆ ಇಸ್ಟೊoದು ಸಂಸಯವೆ?
ಚೀ, ನಿನ್ನ ಪಿರೀತಿ ಎಸ್ಟೆಂದು ನಿನಗೇನು ಗೊತ್ತು?

ಇಂದೆ ಮುಂದೆ ಇದ್ದದ್ದೆಲ್ಲ ಎಡಬಲ ನೂಕಿ,
ನಿನ್ನದೆ ಎಲ್ಲವನು ದೂರದೂರ ಆಕಿ,
ನೀನೇಕೆ ಒಂಟಿಜೀವ ಬದುಕಬೇಕು ಈಗ,
ನನ್ಮೇಲೆ ಕೋಪವೆ ಬೇಸರವೆ ಇಸ್ಟು?

ನಿನ್ನ ಕನ್ನು ಮನಸೆಲ್ಲ ನಾನೆ ಇರುವಾಗ
ಕೋಪ ಬೇಸರದ ಮಾತೇ ಸರಿಯಲ್ಲ;
ಬಯಸಿದ್ದ ನಾವು ಎದುರೆದುರಾದಾಗ
ದೂರ ದೂರ ಈಗ ಓಡುವುದು ಸರಿಯೆ?

ಎದೆ ಸೋಲುವವಳಲ್ಲ, ಇಂದೆ ನೋಡುವವಳಲ್ಲ,
ನನ್ನ ಮಾತು ಬಂದಾಗ ಎಲ್ಲಕ್ಕೂ ಸೈ ನೀನು;
ನಾನು ಕೈ ಚಾಚಿದರೆ ಬಾಚಿ ಇಡಿಯದೆ ಈಗೆ
ದೂರದೂರ ಮತ್ತು ದೂರ ಓಗುವುದು ಸರಿಯೆ?

ನಿನ್ನ ಇಸ್ಟ ಅನಿಸ್ಟ ಪರಿವೆ ಇಲ್ಲದ ನಿನಗೆ,
ದಿನ ಬೆಲಗೆ ನನ್ನ ಇತ ಚಿಂತಿಸುವ ನಿನಗೆ,
ನನ್ನ ನೋವಿನ ವಿಸಯ ತಿಲಿಯಲಿಲ್ಲ ಯಾಕೆ?
ನಿನ್ನ ಬಿಟ್ಟು ನಾನು ಬದುಕುವುದು ಏಗೆ?

ನಿನ್ನ ಸಂತೋಸವೆ ಸಂತೋಸ ನನಗೆ,
ನಿನ್ನೊಂದೊಂದು ನಗುವೂ ಮಲ್ಲಿಗೆ ನನಗೆ;
ದಿನದಿನ ನೀನೀಗೆ ಕನ್ನೀರು ಆಕಿದರೆ
ನಾನೇಗೆ ನಗಲಿ, ನಿನಗೆ ಸಂತೋಸ ತರಲಿ?

ನನ್ನ ಸಂತೋಸದ ಒಂದೆ ಚಿಂತೆಯಲ್ಲೆ
ದೂರದೂರ ನೀನು ಓಡಿದುದೆಂದು ಗೊತ್ತು;
ಉಚ್ಚಿ, ನೀನು ದೂರಾಗಿ ನನಗೆ ಸಂತೋಸವೆ?
ಸೂರ್ಯನೇ ಓದ್ಮೇಲೆ ಬೆಲಕು ಬರುವುದುಂಟೆ?

ನೀನೇನೋ ಏನೇನೋ ಅಂದ್ಕೊಂಡೆ,
ನಾನೇನೋ ಮನಸಾರೆ ತಿಳ್ಕೊಂಡೆ;
ಒಂದಕ್ಕೊಂದು ಕೂಡಿಬಾರದೆ ನೋಡು,
ನಮ್ಮೆರಡು ಜೀವ ಬೇಯುತ್ತಿದೆ ಈಗ.

ನೀನೇನೋ ನಿನ್ನ ಜೀವ ಹರಿದು ಹರಿದು ಬಿಟ್ಟೆ,
ಅದ ನೋಡಿ ನಾನಿಲ್ಲಿ ಕೊರಗಿ ಕೊರಗಿ ಸತ್ತೆ;
ನೀನು ಮತ್ತೆ ಬಾಲಬೇಕು, ನಾನದು ನೋಡಬೇಕು,
ಅದಕ್ಕೆಂದೇ ಉಲಿದಿದೆ ನನ್ನಲ್ಲಿ ಈ ಉಸಿರು.

ಅರಿದು ಅರಿದು ಚೂರು ನೂರಾದ ನಿನ್ನ ಜೀವಕ್ಕೆ
ತಂಪು ತರುವ ಉಸಿರು ನಾನಾಗುವ ಆಸೆ;
ನಿನಗೆ ಒಸ ಉಸಿರು ಸಂತೋಸ ತಂದ ದಿನ
ನನ್ನಲ್ಲಿ ನಾನು ನಗುವುದ ಮತ್ತೆ ನೋಡಬಲ್ಲೆ.

ನನ್ನ ತಂಪಿಗೆಂದು ನಿನ್ನನ್ನೆ ಸುಡುವುದು ಸರಿಯೆ?
ನಿನ್ನ ಬೆಂಕಿಯ ಬೇನೆ ನನಗೆ ತಂಪು ತರುವುದೆ?
ನೀನೆಲ್ಲ ಮರೆತು, ಮಾಡಿದ ತಪ್ಪನ್ನು ನಾವು ಅರಿತು
ತೋಳತೆಕ್ಕೆಗೆ ಬಂದಾಗಲೆ ನಿನಗೆ ನನಗೆ ಸಾಂತಿ.

Wednesday, July 19, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success