ಕಾಲಪುಟಗಳೆಷ್ಟು ಕಳೆದು ಹೋದುವು,
ಹುಟ್ಟು ಸಾವು ಚಕ್ರ ಸುತ್ತಿ ಸುತ್ತಿ ಹೋದುವು,
ಬೀಜ ಮರಗಳಾದುವು, ಮರ ಬಿದ್ದು ಸಸಿಗಳಾದವು,
ಕನಸು ನೆನಸುಗಳು ಕರಗಿ ಭೂತಪ್ರೇತಗಳಾದುವು,
ಭೂಮ್ಯಾಕಾಶದ ನಡುವೆ ಸ್ಥಿರಸ್ಥಿರ ಸ್ತರ ಪ್ರಪಾತವಾದುವು;
ಆದರೆ, ನೀನೆನ್ನ ನೆನಪಾಗಿ, ನೆನಪಿನ ನನೆಯಾಗಿ ನೋನ್‍ತಿರುವೆ,
ಕಾಲನಾಮೆಯ ಹಾುಯಾಗಿ ಜೊತೆ ಸಾಗುತಿರುವೆ.
ಭೂಮ್ಯಾಕಾಶ ಪಾತಾಳದಲ್ಲೆಲ್ಲಿದ್ದರೇನು,
ಕಾಲಚಕ್ರವನೇರಿ ನೀ ಬಳಿ ಬರಲೆ ಬೇಕು;
ದÀಶಕ ಶಡಕಗಳು ಜಾರಿ ದೂರಾದರೇನು,
ನಿನ್ನಾವಾಸಕ್ಕೆ ನೀನು ಹಿಂದಿರುಗಲೇ ಬೇಕು;
ಇದು ಜಗನ್ನಿಯಮ, ವಿಶ್ವವಿಕಸನದ ನಿಯಮ.
This poem has not been translated into any other language yet.
I would like to translate this poem