ಕಾಲಾಯ ತಸ್ಮೈ ನಮಃ Poem by PRAVEEN KUMAR Kannada Songs

ಕಾಲಾಯ ತಸ್ಮೈ ನಮಃ

ಕಾಲಕ್ಕೆ ಬೆಂಕಿ ಹಿಡಿದಾಗ ಉಳಿಯುವುದು ನೆನಪು ಮಾತ್ರ,
ಬರೆ ಕೆಂಡ, ಝಗಝಗಿಸುವ ಜ್ವಲಂತ ಕೆಂಪು ಕೆಂಡ,
ಮತ್ತೆ, ಕರಕು ಇದ್ದಲು, ಬರಿ ಬೂದಿ, ಮತ್ತೇನೂ ಇಲ್ಲ;
ಆ ಕಾವು, ಆಕಾಶಕ್ಕೇರಿದ ಬೆಂಕಿಶಿಖರಗಳು ಹೋುತೆಲ್ಲಿ?
ಬೆಂಕಿಗೆ ಮೈಯೊಡ್ಡಿದ ಕಾಲತೀವ್ರತೆ ಮಾಯವಾುತೆಲ್ಲಿ?
ಕಾಲವೂ ಇಲ್ಲ, ಬೆಂಕಿಯೂ ಇಲ್ಲ, ಉಳಿವುದು ನೆನಪು ಮಾತ್ರ.

ಬೆಂಕಿ ಹಚ್ಚಿದ ಸಂಜೀವಿನಿ ಜೀವವೀಗ ಕಣ್ಣೆದುರೇ ಇಲ್ಲ,
ಸ್ವತಃ ಜ್ವಲಂತ ಬೆಂಕಿಯಲಿ ಬೆಂದು ಬೆಂದು ನಂದಿದೆ ಈಗ,
ಕೆಂಪು ಕೆಂಡವಾಗಿ, ಬರಿ ಬೂದಿಯಾಗಿ ನಲುಗಿದೆ ಎಲ್ಲೋ;
ಬೆಂಕಿ ಕಾವುಗಳಿಲ್ಲ, ಈಗ ಬರೆ ನೋವು ನಿರ್ವಿಣ್ಣತೆ ಎಲ್ಲ,
ಇದು ಬೂದಿ ಮುಚ್ಚಿದ ಕೆಂಡ, ಹಳಸಿದ ಹುಳಿ ಹೆಂಡ,
ಮತ್ತೆಂದು ಬಂದು ಲೋಕ ಸುಡುವುದೋ ತಿಳಿದವರಿಲ್ಲ.

ಬೆಂಕಿಯು ಎಲ್ಲಿದ್ದರೂ ಹೇಗಿದ್ದರೂ ಸುಡುವ ಬೆಂಕಿಯೆ,
ಅದು ಸುಡುತ್ತಿರಲಿ, ಬೂದಿಯಡಿ ಸುಡು ಕೆಂಡವಾಗಿರಲಿ,
ಕಾಲವು ಹದಗೊಂಡಾಗ ಮತ್ತೆ ಬುಗಿಲೇಳುವುದು ದಿಟ;
ಏರಿಳಿತ, ತರಂಗಗಳ ನರನಾಡಿಗಳನುಳ್ಳ ಈ ಲೋಕದಲಿ
ಉಗ್ಗುತಗ್ಗು, ಭರತ ಇಳಿತಗಳು ಪ್ರಕೃತಿಯ ಸಹಜ ಪ್ರವೃತ್ತಿ,
ನಿವಿಷ್ಟತೆಯ ಮೂಲಕ ನೆರೆ ಪೋಣಿಸಿದ ಸ್ಠೃ ಚಿತ್ರವ್ಶೆಚಿತ್ರ.

ಕಾಲ ಪ್ರವಾಹದಲಿ ಹರಿಯುವ ನಾವು ದಡ ಸೇರುವೆವು,
ಅಲೆಮೇಲೆ ಏರಿಳಿದು, ಚಕ್ರತೀರ್ಥ ತುಂಬ ಸುತ್ತಿ ಸುತ್ತಿ,
ಸೋತು ಬಸವಳಿದು ಕೈಬಿಟ್ಟಾಗ ನಾವು ದಡ ಸೇರುವೆವು;
ಕಣ್ಣೀರು ಬೆವರು ರಕ್ತದಲಿ ತೊಯ್ದ ಸಿಧ್ಧಿಯು ಬಹು ಸಿಹಿ,
ಕೈ ಬಿಟ್ಟು ಬಿಟ್ಟು ಮತ್ತೆ ಸೇರಿದ ಸ್ವತ್ತು ಬಲು ಅಮೂಲ್ಯ,
ಕಾಯುವುದೆ ಬದುಕಿನ ತಿರುಳು, ಕಾಲಾಯ ತಸ್ಮೈ ನಮಃ.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success