ಭಾವ ಭಂಗಿ Poem by PRAVEEN KUMAR Kannada Poems

ಭಾವ ಭಂಗಿ

ಬಂದಿತದೋ ಬಂದಿತದೋ ಭಾವಭಂಗಿ ತರಂಗಿಣಿ,
ಶೂನ್ಯ ಬಗಿದು, ಗಗನ ನೆಗೆದು, ಬಂತು ಭಾವವಾಹಿನಿ,
ದಿಕ್ಕುದಿಕ್ಕಿನಿಂದ ಉಕ್ಕಿ, ಗಾಳಿುಂದ ಬಿರುಸು ಹೆಕ್ಕಿ,
ಬಂದಿತದೋ ಬಂದಿತದೋ ಭಾವಭಂಗಿ ತರಂಗಿಣಿ.

ಭೂಮಿುಂದ ಗಗನವರೆಗೆ,
ದಿಗಂತದಿಂದ ದಿಗಂತವರೆಗೆ
ತಲೆಯನೆತ್ತಿ, ಮೈಯಚಾಚಿ,
ಬಿರುಸು ಮಳೆಯ ಗುಡುಗಿನಂತೆ,
ಶಿವನ ಕಣ್ಣ ಬೆಂಕಿಯಂತೆ
ಮೈಯೇರಿ ಬಂತು ಭಾವಭಂಗಿ.

ಕಿಲುಬು ಹಿಡಿದ ಮನದ ತಾಮ್ರ, ತಾಪವೇರಿ, ವಿದ್ಯುತ್ತೇರಿ,
ರಂಗು ರಂಗು ಭಾವಭಂಗಿ ಸೃಜನವೆತ್ತ ವಿದ್ವತ್ತಾಗಿ,
ಗಾನಗೀತೆ ಕವನವಾಗಿ, ಹೃದಯವೇದ್ಯ ವಾದ್ಯವಾಗಿ
ಕಾವ್ಯ ಲಹರಿ ಚಿಮ್ಮಿತು, ಭಾವಭಂಗಿ ಬೆಸೆಯಿತು.

Saturday, April 30, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success