ಜೀವನ-ವಿಕಸನ Poem by PRAVEEN KUMAR Kannada Poems

ಜೀವನ-ವಿಕಸನ

ಜೀವನ ವಿಷ್ಟಪ ವಿಕಸನ ಸಾಧನ,
ವಿಶ್ವವ್ಯವಸ್ಥೆಯ ಚಲನೆಯ ಚೇತನ,
ಊಧ್ರ್ವವಿಸ್ಫೋಟದ ಪ್ರಕೃತಿ ಹಂದರ
ವಿಕಸನಯಾನದ ಅಮೂರ್ತ ಯಂತ್ರ,
ಅನಂತ ವಿಕಾಸದ ವರ್ತುಲ ತಂತ್ರ.

ವಿಶ್ವ ಸ್ಪಂದನದ ಮೌನಮಿಡಿತವೆ ಜೀವನ,
ಕೃಷúರಂಧ್ರದಿಂದೇಳುವ ಮಂತ್ರ ಮಂಥನ,
ಪ್ರಾಣ, ತ್ರಾಣ, ಧಾತು, ಹೇತು ಚೌಕಟ್ಟಿನ ಚಿತ್ರಣ,
ಕಾರ್ಯಕಾರಣ, ದಾರಿಕ್ರಮಣದ ಚೇತನ.

Saturday, April 30, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success