ಬದುಕಿದೆನು ಬದುಕಿದೆನು
ಭವ ಭಯದ ಬಿಗಿುಂದ;
ನಗುನಗುತ ಮಗುವಾಗಿ
ಹೂವಾಗಿ ಅರಳುವೆನು;
ಹಗೆಬಗೆಗಳನು, ಹಾವುನೋವುಗಳನು
ನಿರ್ಭಾವ ನ್ಕ್ರಿಯೆಯಲಿ
ಮರೆತು ಮೆರೆದಾಡುವೆನು,
ನನ್ನಲ್ಲೆ ನಾನಾಗುವೆನು;
ಪರರಲ್ಲಿ ಪರದಾಡಿ, ಪರಿತಪಿಸಿ ಕೆಡದೆ
ಸತ್ತ್ವ ಸ್ವಾನುಭವದ ಮರೆಯಲ್ಲಿ
ಗೌರವದ ಗುರುತರದ ಸರಿದಾರಿಯಲ್ಲಿ
ನಿರ್ಭೀತಿಯಲಿ ನಡೆಯುವೆನು.
ಬೆಂಕಿಬುತ್ತಿಯ ಸುತ್ತ
ಪ್ರದಕ್ಷಿಸಿದರೆ ಸಾಕು,
ಬೆಂಕಿ ಬೇಗೆಯ ಝಳಕೆ
ಪ್ರತಿಸ್ಪಂದಿಸಿದರೆ ಸಾಕು;
ಹೋಮ ಕುಂಡವ ಕಟ್ಟಿ
ಹೋಮಧೂಮಕೆ ನಾಂದಿ ಹಾಡಿದ ಮೇಲೆ
ಸಮಿತ್ತು ಕಟ್ಟಿಗೆ ಕೊಟ್ಟು
ಯಾಗ ನಿಯತ್ತು ಮೇರೆಯಲಿ
ನಡೆಯುವುದು, ನೋಡುವುದು ಸಾಕು;
ಹೋಮಕುಂಡಕೆ ಹೃದಯ
ಹಾರುವುದು ಬೇಡ,
ಬೆಂಕಿ ಬುತ್ತಿಗೆ ಹಾರಿ
ಮೈ ಕೈ ಬೇಯುವುದೂ ಬೇಡ:
ಯಾಗನಿಯತ್ತು ಮೇರೆಯಲಿ ನಡೆಯಲೆಂದು
ಕಣ್ಣುಕಿವಿ ತೆರೆದಿಟ್ಟು
ಸಮಿತ್ತು ಕಟ್ಟಿಗೆ ಸಮರ್ಪಿಬೇಕು,
ಮರುಕ್ಷಣ ಬೆಂಕಿಬುತ್ತಿಗೆ ದೂರ
ಓಡಲೇ ಬೇಕು;
ಹೋಮಕುಂಡಕೆ ಹೃದಯ
ಹಾರುವುದು ಬೇಡ,
ಬೆಂಕಿಬುತ್ತಿಗೆ ಹಾರಿ
ಮೈಕೈ ಬೇಯುವುದೂ ಬೇಡ.
This poem has not been translated into any other language yet.
I would like to translate this poem