ದುಂಬಿಯ ಕೈಂಕರ್ಯ Poem by PRAVEEN KUMAR Kannada Poems

ದುಂಬಿಯ ಕೈಂಕರ್ಯ

ಮೃದು ಮಧು, ಮಧುರ,
ಹೀರಲು ದುಂಬಿಗೆ ತುಂಬಿದ ಕಾತುರ
ಹೂವನು ಅರಸುತ, ಹೂವಿಗೆ ಹಾರುತ;
ಹೂ ಸಂಕುಲದ ಮೈಮೇಲಡರಿದೆ;
ಸಮೃದ್ಧಿಯ ಬ್ರಹ್ಮ ಸ್ಟೃಯ ನಿಯಮ
ಹಾಡುತ ಹೂವಿಗೆ ಕಚುಕುಳಿುಡುತ್ತಿದೆ,
ಸಂಸರ್ಗ ಸುವರ್ಣ ಓಕುಳಿಯಾಗಿದೆ.

ಮುಕ್ಕಣ್ಣನ ಉರಿದ್ಟೃಷ್ಠಿ ತಣಿಸುವ ಜಪಚರ್ಯೆ
ಹೂಮೇಲಿನ ಮೋಹದ ದುಂಬಿ ತತ್ಪರತೆ,
ಪರಾಗಧೂಳಲ್ಲಿ ಬಿದ್ದೇಳುತ ಮೈಮೂಡಿ
ರತಿಯಾಗಿ, ಜೊತೆಯಾಗಿ, ಪ್ರತಿ ಪ್ರಕೃತಿಯಾಗಿ
ಶಿವಸತಿ ಪಾರ್ವತಿಯಾಗಿ ವಿಕಸಿಸಿದೆ,
ಕೈಂಕರ್ಯ ಕೈಲಾಸ ಸೌಂದರ್ಯವಾಗಿದೆ.

Saturday, April 30, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success