ಮೂರ್ಖರಿವರು, ಮನುಷ್ಯರು,
ತಮ್ಮತನ ತಾವರಿಯರು.
ಚಿನ್ನ ತಾಮ್ರ ಅಡಗಿಕೊಂಡ
ಭೂಮಿಗರ್ಭದಿಂದ ಬಂದ
ಬಣ್ಣಬಣ್ಣದದಿರು ಮಣ್ಣು,
ಅಲಭ್ಯಮೂಲ್ಯ ಮನುಷ್ಯರು.
ಕಾಲಕಾಲ ರಸ ವಿರಸ
ಹೀರಿ, ಮೀರಿ ಮೂಲಕ್ಕಿಳಿದು
ಧಾತು ಹೇತು ರೂಪ ಮೆರೆವ
ಆತ್ಮ ಚೋದ್ಯನರಿಯರು.
ಬೆಡಗು ಬಡೆದ ಮಡಕೆಯಾಗಿ
ಜೇನು ಹೊರುವ ಪಾತ್ರೆಯಾಗಿ
ನೀರು ಹೊರಲು ಪೂರ್ತಿ ಕರಗಿ
ಮಣ್ಣು ಸೇರಿ ಮುಗಿವರು.
This poem has not been translated into any other language yet.
I would like to translate this poem