ಕನ್ನಡ ನಾಡು Poem by PRAVEEN KUMAR Kannada Poems

ಕನ್ನಡ ನಾಡು

ಬೆಟ್ಟ, ಕಂದರ, ಬಯಲು, ಸೀಮೆ, ನದಿ, ಕಾಡು
ತೋಳಸೆರೆಯಲ್ಲಿ ಕಡಲು ಸೆರಗು ಚಿಮ್ಮುತ್ತಿದೆ ನೋಡು,
ಮರಾಠ, ದ್ರಾವಿಡ ಗೌರವ ಪಹರೆ ಸ್ನೇಹದ ಹಾಡು
ಮಣ್ಣಲ್ಲಿ ಮಣ್ಣಾಗಿ ಕೂಡಿ ಕಟ್ಟಿದೆ ಕನ್ನಡದ ನಾಡು.

ತಮಿಳು, ತೆಲುಗು, ಮರಾಠ, ಮಲೆಯಾಳರ ಮಧ್ಯೆ
ಸ್ವಾಭಿಮಾನದಿ ತಲೆಯೆತ್ತಿ ನಿಂತಿರುವ ನಾಡು,
ಕರಿನಾಡೆಂದು, ಕರುನಾಡೆಂದು ಗುಣಾವಗುಣ ಹೀರಿ
ಸುಸಂಸ್ಕøತಿ ಪರಿಪಕ್ವಗೊಂಡಂತಹ ನಾಡು.

ಹೊಯ್ಸಳ, ರಾಷ್ಟ್ರಕೂಟ, ಚಾಲುಕ್ಯ ಶಿಲ್ಪ ಮೂಡಿದ,
ಪಂಪ, ರನ್ನ ಕಾವ್ಯಗಂಗೆ ಪ್ರವಾಹವಾಗಿ ಹರಿದು ನಿಂತ,
ವಿಜಯನಗರ ರಾಜವಂಶ ದೇಶಧರ್ಮ ಕಾದುನಿಂತ
ಬಸವದಾಸರಾದಿಯಾಗಿ ದೂರಿತೋರಿದಂತ ನಾಡು.

ಗೌಡ, ಲಿಂಗಾಯತ, ತುಳುವ, ಕೊಡಗ, ಕೊಂಕಣ,
ಮುಸ್ಲೀಮ, ಕ್ರೈಸ್ತ, ಬ್ರಾಹ್ಮಣ, ಕೊರಗ, ಜೈನ, ವೈಷ್ಣವ
ಸ್ನೇಹದಿಂದ ತನ್ನದೆನ್ನುವ ಮಣ್ಣು, ಗಾಳಿ, ಬೆಟ್ಟ, ಕಾಡು,
ಭಾಷೆ, ಜನ, ನದಿ ಕೂಡಿ ಮೂಡಿ ಬಂದ ನಾಡಿದು.

COMMENTS OF THE POEM
READ THIS POEM IN OTHER LANGUAGES
Close
Error Success