ಸುಖ-ದು: ಖ Poem by Praveen Kumar in Bhavana

ಸುಖ-ದು: ಖ

ಗಾಳಿಯಲ್ಲಾಡುವ ಮೋಡದ ಗೂಡು
ಕಪ್ಪಿನ ಸಿಡುಕಿನ ಉಡುಗೆಯ ತೊಟ್ಟು,
ಹರ್ಷದ ಮಳೆಹನಿ ಧಾರೆಯ ನೀಡು.

ಬತ್ತಲೆ ಕತ್ತಲೆ ಹೊದಿಕೆಯ ಹಬ್ಬಿ,
ಚಿನ್ನದ ಕಿರಣದ ಬೆಳಕಿನ ಉಷೆಗೆ
ಕಾಲದ ಚಕ್ರ, ಸುಸ್ವಾಗತ ನೀಡು.

ಮಾಘದ ಮೇಘಾವೇಗವ ತಂದು,
ಸುಗ್ಗಿಯ ಸಂಗತಿ ಸನ್ನಿಧಿಗಾಗಿ
ಋತುಗಳ ರಾಜ, ಸನ್ನದ್ಧತೆ ನಡೆಸು.

ಸಂತಸ ಗೆಲುವಿನ ದಿಬ್ಬವನೇರಲು,
ಕಷ್ಟಕಾರ್ಪಣ್ಯದ ಕಂದಕ, ಕಂಬನಿ
ದಾರಿಯಲ್ಲೆನ್ನ, ವಿಧಿ, ನೀ ನಡೆಸು.

ತೃಪ್ತಿಯ ಸುಪ್ತ ಬುಗ್ಗೆಯ ಧಾರೆಯ
ತಡೆಯನು ಕಡಿಯಲತೃಪ್ತತೆ ಹೊನಲು,
ಪ್ರವಾಹದೋಪದಿ ಹಬ್ಬುತ ಹರಿಸು.

ಅಗೋಚರ ಮೃತ್ಯು, ನೀನೆನ್ನನು ನುಂಗಿ,
ಹೊಸತಿನ ಹುಟ್ಟಿಗೆ, ಯೌವನ ದಿನಕೆ
ಬಾಗಿಲನಗಲ ತೆಗೆಯೋ ಬೇಗ.

Saturday, April 30, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success