ಸ್ನೇಹ Poem by Praveen Kumar in Bhavana

ಸ್ನೇಹ

ಸ್ನೇಹವು ಬಲೆಯಲ್ಲ, ಗೆಳೆಯ,
ಮೇಲೇರಲಿರುವ ನೂಲಿನ ಏಣಿ;
ಸ್ನೇಹವು ಬಂಧನದ ಪಂಜರವಲ್ಲ,
ಗಗನ ವಿಹಾರದ ವಿಹಂಗಮ ಕರಣ.

ಸ್ನೇಹ ಜೇನಿನ ತನಿಗೆ ನಾನು ನೀನುಗಳಿಲ್ಲ,
ದೇಹ ದಾಹಗಳ ದ್ರೋಹವಾಹಗಳಿಲ್ಲ,
ಹೊರ ಹರಿಯುವ ಭಾವತೀವ್ರತೆ, ತ್ಯಾಗ
ಕೂಡಿ ನಡಿಯುವ ಛಲ, ಅಚಲ ಅವೇಗ
ಮಥಿಸಿ ಮೇಲೇರುವ ಮಧುರ ಮಧು ಸ್ನೇಹ,
ಜೊತೆ ಜೀವ ಬಯಸುವ ಚೈತನ್ಯ ಮಾರ್ಗ.

Saturday, April 30, 2016
Topic(s) of this poem: friendship
COMMENTS OF THE POEM
READ THIS POEM IN OTHER LANGUAGES
Close
Error Success