ಹೆಣ್ಣು Poem by PRAVEEN KUMAR Kannada Poems

ಹೆಣ್ಣು

ಮಾನಸಲೋಕದ ಮೋಹಕ ಮೃಗಜಲ,
ಪುರುಷ ಪರಾರ್ಥದ ಮೂಲಪ್ರಕೃತಿ ಜಾಲ,
ಪ್ರೀತ್ಯಾದರ ಗಂಗೆಯ ದೇಹದೇವಲ,
ಹೆಣ್ಣು ಪ್ರಪಂಚದ ಸಾತ್ತ್ವಕ ಸಂಚಲ.

ಆಶೋತ್ತರಗಳ ಆದ್ಯಂತವು ಹೆಣ್ಣು,
ಆದ್ಯಂತದ ಮೂಲ, ಕೊಂಡಿಯು ಹೆಣ್ಣು,
ನಿಶ್ಚಲತೆಯನೆಬ್ಬಿಸಿ ಚಂಚಲತೆಯ ತರುವ,
ಚಂಚಲತೆಯ ಗರ್ಭದಿ ಹೊಸ ಸ್ಟೃಯ ತರುವ
ಚೇತನದಲೆಗಳ ಕಾರಣ ಹೆಣ್ಣು.

ಲೋಕಸೌಂಧರ್ಯದ ಸಜೀವ ರೂಪ,
ಶಕ್ತಿ, ಬೆಳಕಿನ ದಿವ್ಯ ನಂದಾದೀಪ,
ದೇವ-ದಾನವರಿಂದ, ಬೆಳಕು-ಕತ್ತಲೆಯಿಂದ
ಜೀವನ ಲೆತ್ತವನಾಡಿಸುವ ಸಜೀವ ಲೀಲೆ.

Wednesday, July 12, 2017
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success