ಯಾರೂ ತುಳಿಯಯದ ದಾರಿ Poem by Venkatesh Davangere

ಯಾರೂ ತುಳಿಯಯದ ದಾರಿ

ಹಳದಿ ಕಾಡಿನ ನಡುವೆ ಎರಡು ರಸ್ತೆಗಳು ವಿಭಜಿಸಿದವು,
ಕ್ಷಮಿಸಿ, ನಾನು ಎರಡೂ ರಸ್ತೆಗಳಲ್ಲಿ ಕ್ರಮಿಸಿ
ಒಬ್ಬನೇ ಯಾತ್ರಿಕನಾಗಲಾರೆ, ನೋಡುತ್ತಾ ಕೂತೆ ನಾನು
ಒಂದೇ ರಸ್ತೆ ಎಷ್ಟು ದೂರಸಾದ್ಯವೂ ಅಷ್ಟು
ಅದು ಕಾಣದೆ ಮರೆಯಾಗಿ ಹೋಗುವಷ್ಟು;

ಈಗ ನಾನು ಮತ್ತೊಂದರ ಕಡೆಗೆ ನೋಡಿದೆ,
ಎಷ್ಟು ಸಾಧ್ಯವೋ ಅಷ್ಟು, ಇಷ್ಟವಾಗಿದ್ದು ಬಹುಷಃ ಆ ರಸ್ತೆ
ಹಸಿರಿನಿಂದ ಕೂಡಿದ್ದು ಯಾರು ಅಷ್ಟಾಗಿ ನಡೆದಾಡಿದ್ದಿಲ್ಲಿರಬಹುದು,
ಯಾರಾದರೂ ನಡೆದಿದ್ದರೆ, ಮೊದಲಿನ ರಸ್ತೆಯಂತೆ ಇರುತಿತ್ತು

ಮರುದಿನ ಮುಂಜಾನೆ ಎರಡು ರಸ್ತೆಗಳು ತರಗೆಲೆಗಳಿಂದ
ಕೂಡಿ ಹಾಗೆಯೇ ಇದ್ದವು, ಯಾರು ನಡೆಯದೆ ಇದ್ದ ಹಾಗೆ.!
ಒಹ್!ಮೊದಲೆನೆಯ ರಸ್ತೆ ನನ್ನ ಮತ್ತೆಂದೂಹಿಂದಿರುಗದ
ಗಮ್ಯದ ಕಡೆಗೆ ಕರೆದೊಯ್ಯುವುದೆಂದು ಗೊತ್ತಿದ್ದರೂ,
ನಾನದನ್ನು ಮರುದಿನದ ಪಯಣಕ್ಕೆಂದು ಮೀಸಲಿಟ್ಟೆ..!

ಪ್ರಾಯಶಃ ಯುಗ ಯುಗಗಳಿಗೂ ನಾನು ನಾನು ನಿಟ್ಟುಸಿರಿಟ್ಟು
ಹೇಳಬಲ್ಲೆ; ಹಳದಿ ಕಾಡಿನ ನಡುವೆ ಎರಡು ರಸ್ತೆಗಳು, ಮತ್ತು ನಾನು,
ನಾನು ಕಡಿಮೆ ಜನರು ತುಳಿದ ರಸ್ತೆಯನ್ನೇ ಆಯ್ದುಕೊಂಡೆ...
ಉಳಿದದ್ದೆಲ್ಲ ಇತಿಹಾಸ..!

This is a translation of the poem The Road Not Taken by Robert Frost
Thursday, November 28, 2019
Topic(s) of this poem: travel
COMMENTS OF THE POEM
Close
Error Success