Praveen Kumar in Bhavana Poems

Hit Title Date Added
41.
ದಿವ್ಯ ಬೆಳಕು

ದೂರ ಲೋಕದ ದಿವ್ಯ ಬೆಳಕಿನ
ಪುಂಜ ನಮ್ಮೆಡೆ ಚೆಲ್ಲಿದೆ,
ಕಣ್ಣ ಕಚ್ಚುವ ಕಪ್ಪು ಕತ್ತಲೆ
ಮೆಲ್ಲ ಮೆಲ್ಲನೆ ಕರಗಿದೆ,
...

42.
ಹಕ್ಕಿ

ಆಕಾಶದೆತ್ತರಕೆ ತೇಲುತ್ತ, ಮೇಲೇರುತ್ತ
ಹಕ್ಕಿ ಹಾರುತ್ತಿದೆ, ನೋಡಿದೆಯ ಚೆಲುವೆ?
ತೊಡಕು ಕಂದರ, ಬೆಟ್ಟ, ದಿಟ್ಟ ಭೂಮಿಯ ಬಿಟ್ಟು
ನೀಲಕಿನ್ನರ ಲೋಕ, ಮಾಯಾನಗರಿಯ ಕಡೆಗೆ
...

43.
ಎತ್ತರ

ನಿನ್ನೆತ್ತರ ನಿನಗಿದ್ದರೆ ಅವರಿವರ ಭಯ ನಿನಗೇಕೆ?
ನಿನ್ನೆತ್ತರವೇರುವವ ಮತ್ತೊಬ್ಬನಿರಲಾರ;
ಮೊಣಕಾಲೆತ್ತರ ನಿಂತು ಹಂಗಿಸುವವರ ಹಂಗೇಕೆ?
ಕಣ್ಣೆತ್ತಿ ನಿನ್ನ ಕಡೆ ನೋಡುವವನಲ್ಲಿರಲಾರ.
...

44.
ಹೀಗೇಕೆ?

ನಾವು ಸಮಾಜದ ನಿರ್ಲಜ್ಜ ಶುನಕಗಳು,
ನಾಯಕರೆಂದು ನಿರೂಪ ಹೊರಡಿಸುವ ನರಿನಿರಂಕುಶಿಗಳ
ಮನೆಬಾಗಿಲು ಕಾಯುವ, ಕರೆದರೆ ಬಾಲಬೀಸುತ ಬರುವ
ಜೀವವನೆ ಕೊಡುವ ನಿರ್ಜೀವ ಶುನಕಗಳು,
...

45.
ನಡೆದು ಬಂದ ದಾರಿ

ನಿಮ್ಮೊಡನೆ ಹೋರಾಟಕ್ಕೆಂದು ಬಂದವರಲ್ಲ ನಾವು,
ನಿಮ್ಮೊಡನೆ ಕಾದಾಡಿ ಗೆಲ್ಲುವ ಬಯಕೆ ಮೂಡಿದವರಲ್ಲ;
ನಮ್ಮ ಸ್ಥಾಪಿಸಲೆಂದು ನಿಮ್ಮ ಭೂಮಿ ಸೀಮೆ ಕ್ರಮಿಸುವುದಿಲ್ಲ,
ಬೇರುಗಳ ಕಿತ್ತು ಕ್ರಾಂತಿಕಿಡಿ ಹಾರಿಸುವ ಕೆಂಡಗಳಲ್ಲ,
...

46.
ಬಾಗಿಲು ತೆರೆದಿದೆ

ದಾರಿಯಗಲವಿದೆ, ಬಾಗಿಲು ತೆರೆದಿದೆ,
ಆತುರದಿ ಸ್ವಾಗತಕೆ ಕಾದಿರುವೆ ನಾನು;
ಬರುವವರೆಲ್ಲ ಬನ್ನಿ ಮುಜುಗರಗಳ ಮರೆತು,
ಗುಣಾವಗುಣ ಜಾತಿಯಂತಸ್ತು ಮರೆತು,
...

47.
ಹೋರಾಟ

ಹೋರಾಡಿ ಹೊಡೆದಾಡಿ ಜೀವ ಕಳೆಗುಂದಿತು,
ಹೊಲಸಲ್ಲಿ ಗುದ್ದಾಡಿ ಜೀವ ಬೆಂಡಾಯಿತು;
ಕಳೆದುಳಿದ ತೇಜಸ್ಸು ಮಸುಕಾಗಿ ನಿಂತು,
ಕಳಿತ ಪ್ರೌಢಿಮೆ ಕೊಳೆತು ಹುಳದೊಡ್ಡಿಯಾಗಿದೆ ಇಂದು;
...

48.
ಗಿಣಿಮರಿ

ಅದೊಂದು ಚಂದದ ಚಿನ್ನದ ಬಣ್ಣದ
ಕೆಂಪಿನ ತೊಟ್ಟಿನ, ಅಂದದ ಜುಟ್ಟಿನ
ಇನಿದನಿ ಕೊರಳಿನ ಸುಂದರ ಗಿಣಿಮರಿ.
...

49.
ಎಚ್ಚೆತ್ತು ಬನ್ನಿ

ಬನ್ನಿರೆಲ್ಲ ಎಚ್ಚೆತ್ತು ಜನರೆ, ಎದೆಯನೆತ್ತಿ ಮುಂದೆ ಬನ್ನಿ,
ಸ್ವಂತ ಬುದ್ಧಿ ಒಳಗೆ ತಿಕ್ಕಿ, ಸತ್ಯ ನ್ಯಾಯ ಬೆಂಕಿ ಧರಿಸಿ,
ಲಕ್ಷಲಕ್ಷ ಸಂಖ್ಯೆಯಲ್ಲಿ, ಗುಂಪು ಗುಂಪಿನಲ್ಲಿ ಬನ್ನಿ,
ರಂಗಮಂಚದ ಮಧ್ಯೆ ಬನ್ನಿ, ರಣರಂಗದ ನಡುವೆ ಬನ್ನಿ,
...

50.
ಮೃಗತೃಷ್ಣೆ

ಆಶೆ ಮುಂದೆ
ವಿಧಿಯು ಹಿಂದೆ
ಮಧ್ಯೆ ನಾವು, ಕುರಿಯ ಮಂದೆ,
ಬೇಕು ಎಂದೆ
...

Close
Error Success