ಚಿಲಿಪಿಲಿ ನಿನಾದದ ಸಂಗೀತ ಮೊಳಗಿ ಸುವ ಮುಂಜಾವಿನ
ರಾಗದಲಿ ದನಿಗೂಡಿಸಿ ಸಂಗೀತದ ಸವಿಜೇನ ಸವಿಯಲೇ,
ಇಲ್ಲ ಹಳಸಿದ ಯೇೂಚನೆಗಳ ಕಿರಿಕಿರಿ ಯಲಿ ಏನನ್ನೇೂ ನೆನೆದು
ಚುಚ್ಚಿ ಬೆಚ್ಚಿಬೀಳಿಸುವ ತಾರತಮ್ಯ ಗಳ ನಡುವೆ ಹರಿಯಲೇ
ಸಂಚು-ಕಾಂಚಾಣಗಳ, ಏರುಪೇರುಗಳ ಹೊತ್ತ ಮಣಭಾರ ಸುದ್ದಿ ಸಗಟುಗಳ ತೂಗಿ ಭಾಗಿಸಿ ಮೆಚ್ಚಿ ತಲೆತೂಗಲೇ
ಹುಸಿ ಮೆರಗಿನಲಿ.. ಈ ಪರಿಯಾಗಿ, ಪರಿಪರಿಯಾಗಿ.. ಇಂತು?
ಯಾರೂ ಕಾಣದ ಎಲ್ಲಿಯೂ ಇಲ್ಲದ ಕಲ್ಪನೆಯ ಸವಿ ಸಂತಸ
ಸಿಗುವುದೇ ಹೋನ್ನು- ಹಣದ ಭಾರೀ ಸುರಿಮಳೆಯ ಕ್ಷೇತ್ರದಲ್ಲಿ
ಭಾರೀ ಚೀಲಗಳ ತುಂಬಿ, ತುಂಬುತ, ಆಯಾಸಗೊಂಡರೂ
ಡಬ ಡಬಿಸುತಿರುವ ಆ ಎರವಲು ಹೃದಯ ನಡಿಗೆಯಲಿ
ಬಟ್ಟಬಯಲಿನ, ರಣ ಬಿಸಿಲಿನ ಒಣ ನಡಿಗೆಯಲಿ...?
This poem has not been translated into any other language yet.
I would like to translate this poem